ದೇಶಕೇಂದ್ರ ಉಚಿತ ಸೌಲಭ್ಯಗಳನ್ನು ವಿರೋಧಿಸುತ್ತಿರುವ ರೀತಿ ನೋಡಿದರೆ, ಅದರ ಹಣಕಾಸು ನಿರ್ವಹಣೆಯಲ್ಲಿ ಏನೋ ತಪ್ಪಾಗಿದೆ: ಕೇಜ್ರಿವಾಲ್
ಜನರಿಗೆ ಉಚಿತ ಸೌಲಭ್ಯಗಳನ್ನು ನೀಡುವುದನ್ನು ಕೇಂದ್ರ ಸರ್ಕಾರ "ಬಲವಾಗಿ ವಿರೋಧಿಸುತ್ತಿರುವ" ರೀತಿ ನೋಡಿದರೆ ಅದರ ಹಣಕಾಸಿನಲ್ಲಿ ಏನೋ ತಪ್ಪಾಗಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಗುರುವಾರ ಹೇಳಿದ್ದಾರೆ.