ರಾಜ್ಯಶಿರಸಿ: ಬೆಳೆ ಹಾನಿ ಭೀತಿ, ಸಾಲ ಮರುಪಾವತಿಸಲಾಗದೆ 65 ವರ್ಷದ ರೈತ ಆತ್ಮಹತ್ಯೆ
ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಹೆಬ್ಬುತಿ ಗ್ರಾಮದಲ್ಲಿ ರೈತರೊಬ್ಬರು ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರನ್ನು ಜಗದೀಶ ಚೆನಪ್ಪ (65) ಎಂದು ಗುರುತಿಸಲಾಗಿದ್ದು, ಅಂಡಗಿ ಗ್ರಾಮದ ಸಹಕಾರಿ ಬ್ಯಾಂಕ್ನಲ್ಲಿ ಪಡೆದಿದ್ದ 3 ಲಕ್ಷ ಸಾಲ ಮರುಪಾವತಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.