ರಾಜ್ಯಅರಣ್ಯ ಭೂಮಿ ಮೇಲೆ ಬರದ ಪರಿಣಾಮ ಕುರಿತು ಶೀಘ್ರದಲ್ಲೇ ಸಮೀಕ್ಷೆ: ಸಚಿವ ಈಶ್ವರ್ ಖಂಡ್ರೆ
ರಾಜ್ಯದಲ್ಲಿ ಬರಪೀಡಿತ ಪ್ರದೇಶಗಳ ಸಮೀಕ್ಷೆಯನ್ನು ಕೇಂದ್ರ ತಂಡ ಪೂರ್ಣಗೊಳಿಸಿದ್ದು, ರಾಜ್ಯದ ಅರಣ್ಯಗಳ ಮೇಲೆ ಬರ ಮತ್ತು ಹವಾಮಾನ ಬದಲಾವಣೆಯ ಪರಿಣಾಮಗಳ ಕುರಿತು ಮತ್ತೊಂದು ಸಮೀಕ್ಷೆಯನ್ನು ಶೀಘ್ರದಲ್ಲೇ ಕೈಗೆತ್ತಿಕೊಳ್ಳಲಾಗುವುದು ಎಂದು ಸಚಿವ ಈಶ್ವರ್ ಖಂಡ್ರೆ ಅವರು ಸೋಮವಾರ ಹೇಳಿದರು.