food grains

ಹಾಲಿನ ಉತ್ಪನ್ನಗಳು-ಆಹಾರ ಧಾನ್ಯಗಳ ಬೆಲೆ ಹೆಚ್ಚಳ, ನಾಳೆಯಿಂದಲೇ ಜಾರಿ: ಜೀವನ ಮತ್ತಷ್ಟು ದುಬಾರಿ
ಮೊಸರು, ಮಜ್ಜಿಗೆ, ತುಪ್ಪ ಸೇರಿದಂತೆ ಹಲವು ಹಾಲಿನ ಉತ್ಪನ್ನಗಳ ದರ ನಾಳೆಯಿಂದ ಹೆಚ್ಚಳವಾಗಲಿದೆ. ಹಾಲಿನ ಉತ್ಪನ್ನಗಳು ಮತ್ತು ಆಹಾರ ಧಾನ್ಯಗಳ ಮೇಲೆ ಸರಕು ಮತ್ತು ಸೇವಾ ತೆರಿಗೆ(GST) ವಿನಾಯ್ತಿಯನ್ನು ಜಿಎಸ್ ಟಿ ಮಂಡಳಿ ಹಿಂಪಡೆದ ಹಿನ್ನೆಲೆಯಲ್ಲಿ ಹಾಲಿನ ಉತ್ಪನ್ನಗಳ ಬೆಲೆ ಹೆಚ್ಚಳವಾಗಲಿದೆ. ಆದರೆ ಸದ್ಯಕ್ಕೆ ಹಾಲಿನ ಬೆಲೆ ಮಾತ್ರ ಏರಿಕೆಯಾಗುವುದಿಲ್ಲ.

ಆಹಾರ ಧಾನ್ಯಗಳ ಮೇಲೆ ಜಿಎಸ್ ಟಿ: ಅಕ್ಕಿ ಗಿರಣಿದಾರರಿಂದ ನಾಳೆ ಪ್ರತಿಭಟನೆ
ಆಹಾರ ಧಾನ್ಯ ಹಾಗೂ ನಿತ್ಯೋಪಯೋಗಿ ವಸ್ತುಗಳ ಮೇಲೆ ಶೇಕಡಾ 5ರಷ್ಟು ಜಿಎಸ್ ಟಿ ತೆರಿಗೆ ವಿನಾಯ್ತಿಯನ್ನು ಹೊರತುಪಡಿಸಿ ಹೊಸ ತೆರಿಗೆ ವಿಧಿಸಲು ಹೊರಡಿಸಿರುವ ಜಿಎಸ್ ಟಿ ಕೌನ್ಸಿಲ್ ಆದೇಶ ಹಿಂಪಡೆಯಬೇಕೆಂದು ಒತ್ತಾಯಿಸಿ ರಾಜ್ಯ ಅಕ್ಕಿ ಗಿರಣಿದಾರರ ಸಂಘ ನಾಳೆ ಜುಲೈ 15ರಂದು ಪ್ರತಿಭಟನೆ ಹಮ್ಮಿಕೊಂಡಿದೆ.

ಎಫ್ ಸಿಐ ಗೋದಾಮಿನಲ್ಲಿ 1,550 ಟನ್ ಗಳಷ್ಟು ಧಾನ್ಯಗಳು ಹಾನಿ, ವ್ಯರ್ಥ!
ಲಾಕ್ ಡೌನ್ ಸಮಯದಲ್ಲಿ ಹಲವಾರು ವಲಸಿಗ ಕಾರ್ಮಿಕರು ತಮ್ಮ ಊರುಗಳಿಗೆ ಕಾಲ್ನಡಿಗೆಯಲ್ಲೇ ಸಂಚರಿಸುತ್ತಿದ್ದಾಗ ಆಹಾರವಿಲ್ಲದೇ ಸಾವನ್ನಪ್ಪಿದ್ದು ಒಂದೆಡೆಯಾದರೆ. ಈ ವರ್ಷದಲ್ಲಿ ಬರೊಬ್ಬರಿ 1,550 ಟನ್ ಗಳಷ್ಟು ಆಹಾರ ಧಾನ್ಯಗಳು ಎಫ್ ಸಿಐ ಗೋದಾಮುಗಳಲ್ಲಿ ಹಾನಿಗೊಳಗಾಗಿದೆ.

ರಾಜ್ಯಕ್ಕೆ ಕೇಂದ್ರದಿಂದ 4.45 ಲಕ್ಷ ಮೆಟ್ರಿಕ್ ಟನ್ ಆಹಾರ ಧಾನ್ಯ ಪೂರೈಕೆ
ಪ್ರಧಾನ ಮಂತ್ರಿ ಗರಿಬ್ ಕಲ್ಯಾಣ ಅನ್ನ ಯೋಜನೆ ಅಡಿಯಲ್ಲಿ ಏಪ್ರಿಲ್ ನಿಂದ ಜೂನ್ 2020 ರವರೆಗೆ 3 ತಿಂಗಳ ಕಾಲ 4.01 ಕೋಟಿ ರಾಷ್ಟ್ರೀಯ ಆಹಾರ ಭದ್ರತಾ ಯೋಜನಾ ಕಾಯ್ದೆಯಡಿ (ಎನ್.ಎಫ್.ಎಸ್.ಎ.) ಅರ್ಹ ಫಲಾನುಭವಿಗಳಿಗೆ ಉಚಿತವಾಗಿ ಆಹಾರ ಧಾನ್ಯ ವಿತರಿಸಲು 2351 ಕೋಟಿ ರೂಪಾಯಿಗಳ ವೆಚ್ಚವನ್ನು ಕೇಂದ್ರ ಸರ್ಕಾರ ಭರಿಸುತ್ತಿದ್ದು, ಕಳೆದ ಮೇ 7ರವರೆಗೆ ರಾಜ್ಯ ಸರ್ಕಾರ 1735 ಕೋಟಿ

ಚಿತ್ರರಂಗದ ಪತ್ರಕರ್ತರು, ಛಾಯಾಗ್ರಾಹಕರಿಗೆ ಆಹಾರ ಧಾನ್ಯ ವಿತರಿಸಿದ ಸಚಿವರಾದ ಬಿಸಿ ಪಾಟೀಲ್, ಗೋಪಾಲಯ್ಯ
ಕೃಷಿ ಸಚಿವ ಹಾಗೂ ಚಲನಚಿತ್ರ ನಟರೂ ಆಗಿರುವ ಬಿ.ಸಿ.ಪಾಟೀಲ್ ಹಾಗೂ ಆಹಾರ ಸಚಿವ ಗೋಪಾಲಯ್ಯ ಅವರಿಂದು ಚಿತ್ರರಂಗದ ಪತ್ರಕರ್ತರು ಹಾಗೂ ಛಾಯಾಗ್ರಾಹಕರಿಗೆ ಉಚಿತ ಆಹಾರ ಧಾನ್ಯಗಳನ್ನು ವಿತರಿಸಿದರು.

ಪಡಿತರ ಚೀಟಿ ಇಲ್ಲದವರಿಗೂ ಆಹಾರ ಧಾನ್ಯಗಳ ವಿತರಣೆ: ಸಿಎಂ ಯಡಿಯೂರಪ್ಪ
ಕೊರೋನಾ ವೈರಸ್ ಸೋಂಕಿನ ತಡೆಗೆ ಲಾಕ್ ಡೌನ್ ಆಗಿರುವುದರಿಂದ ಕೂಲಿ ಕಾರ್ಮಿಕರು ಸೇರಿದಂತೆ ಬಡವರಿಗೆ ಒಂದು ಹೊತ್ತಿನ ಊಟಕ್ಕೂ ತೊಂದರೆಯಾಗಿದ್ದು ಈ ನಿಟ್ಟಿನಲ್ಲಿ ಜನರು ಹಸಿವಿನಿಂದ ಪರಿತಪಿಸಬಾರದು ಎಂದು ಪಡಿತರ ಚೀಟಿ ಇಲ್ಲದವರಿಗೂ ಆಹಾರ ಧಾನ್ಯಗಳನ್ನು ವಿತರಿಸಲಾಗುವುದು ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ತಿಳಿಸಿದ್ದಾರೆ.

ಎಪಿಎಲ್ ಕಾರ್ಡ್‍ದಾರರಿಗೆ ಅನ್ನ ಭಾಗ್ಯ
1ರು.ಗೆ 1ಕೆಜಿ ಅಕ್ಕಿ ನೀಡುವ ರಾಜ್ಯ ಸರ್ಕಾರದ ಅನ್ನಭಾಗ್ಯ ಯೋಜನೆಯನ್ನು ಎಪಿಎಲ್ ಕಾರ್ಡ್‍ದಾರರಿಗೂ ವಿಸ್ತರಿಸಲು ಮುಂದಾಗಿದೆ.

