ರಾಜ್ಯಭಾರತ ಅಂಚೆಯ MSSC ಯೋಜನೆಗೆ ಮಂಗಳೂರಿನ ಕುಟುಂಬದ ಐದು ತಲೆಮಾರು ನೋಂದಣಿ!
ಕರಾವಳಿ ಜಿಲ್ಲೆ ಮಂಗಳೂರು ಮೂಲದ ಈ ಕುಟುಂಬದ ಮುತ್ತಜ್ಜಿಯ ವಯಸ್ಸು 103, ಅವರ ಮರಿಮೊಮ್ಮಗಳಿಗೆ ಮೂರು ವರ್ಷ. ಐದು-ಪೀಳಿಗೆಯ ಈ ಕುಟುಂಬ ಸದಸ್ಯರನ್ನು ಒಗ್ಗೂಡಿಸಿದ್ದು ಭಾರತೀಯ ಅಂಚೆ ಇಲಾಖೆ ಇತ್ತೀಚೆಗೆ ಆರಂಭಿಸಿರುವ ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ (MSSC) ಅಡಿಯಲ್ಲಿ ಖಾತೆಗಳನ್ನು ತೆರೆದಿದ್ದಾರೆ.