ರಾಜ್ಯಚೀನಾದಿಂದ ಬೆಂಗಳೂರಿಗೆ ಆಗಮಿಸಿದ ಮೊದಲ ಚಾಲಕರಹಿತ ಮೆಟ್ರೋ ರೈಲು!
ಚೀನಾದಿಂದ ಆರು ಬೋಗಿಗಳನ್ನು ಒಳಗೊಂಡ ಮೊದಲ ಚಾಲಕ ರಹಿತ ಮೆಟ್ರೋ ರೈಲು ಬುಧವಾರ ಬೆಂಗಳೂರಿಗೆ ಆಗಮಿಸಿದೆ. ಈ ರೈಲು ದಕ್ಷಿಣ ಬೆಂಗಳೂರಿನ ಐಟಿ ಕೇಂದ್ರವಾದ ಎಲೆಕ್ಟ್ರಾನಿಕ್ ಸಿಟಿಯ ಹೆಬ್ಬಗೋಡಿ ಡಿಪೋಗೆ ಬುಧವಾರ ಮುಂಜಾನೆ ಆಗಮಿಸಿತು ಎಂದು ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ ತಿಳಿಸಿದೆ.