ದೇಶ'ಅಮ್ಮಾ.. ನಿರ್ಮಲಮ್ಮಾ... ಯಾಕೆ ಸುಳ್ಳು ಹೇಳ್ತೀಯಾ ತಾಯಿ... 11,495 ಕೋಟಿ ರೂ. ಯಾಕೆ ಕೊಡಲಿಲ್ಲ': ಸಿದ್ದರಾಮಯ್ಯ
ಹಣಕಾಸು ಆಯೋಗ ಸ್ವತಂತ್ರ ಸಂಸ್ಥೆ. ಅದರಲ್ಲಿ ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡುವುದಿಲ್ಲ ಎಂದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ವಿರುದ್ಧ ಇಂದು ದೆಹಲಿಯ ಜಂತರ್ ಮಂತರ್ ನಲ್ಲಿ ಪ್ರತಿಭಟನೆ ವೇಳೆ ಸಿಎಂ ಸಿದ್ದರಾಮಯ್ಯ ಹಾಸ್ಯಮಿಶ್ರಿತವಾಗಿ ನಯವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.