Final rites

ಮೈಸೂರು: ಹಿರಿಯ ಗಾಯಕಿ ಎಸ್ ಜಾನಕಿಗೆ ಅಭಿಮಾನಿಗಳು, ಗಣ್ಯರಿಂದ ಭಾವಪೂರ್ಣ ವಿದಾಯ; Video
ಅಂತಿಮ ನಮನ ಸಲ್ಲಿಸಿದ ಹಿರಿಯ ಸಂಗೀತ ನಿರ್ದೇಶಕ ಹಂಸಲೇಖ, ಜಾನಕಿ ಅವರ ಅಂತ್ಯಸಂಸ್ಕಾರ ನಡೆಯಲಿರುವ ಹೆಚ್.ಡಿ. ಕೋಟೆ ತಾಲೂಕಿನ ಕಣಿಯನಹುಂಡಿಯಲ್ಲಿ ಅವರ ಸ್ಮಾರಕ ನಿರ್ಮಿಸಲು ಎಲ್ಲ ಕಲಾವಿದರು ಒಟ್ಟಾಗಿ ಮುಂದಾಗಲಿದ್ದಾರೆ ಎಂದು ತಿಳಿಸಿದರು. ಇಂದು ಅಪರಾಹ್ನ ಸುಮಾರು 3 ಗಂಟೆಗೆ ಅಂತ್ಯಕ್ರಿಯೆ ನಡೆಯಲಿದೆ.

ಅಜಿತ್ ಪವಾರ್ ಪಂಚಭೂತಗಳಲ್ಲಿ ಲೀನ: ಅಮಿತ್ ಶಾ, ಫಡ್ನವೀಸ್ ಭಾಗಿ; ಸಕಲ ಸರ್ಕಾರಿ ಗೌರವದೊಂದಿಗೆ ಭಾವಪೂರ್ಣ ವಿದಾಯ
ಬೆಳಿಗ್ಗೆ 11 ಗಂಟೆ ಸುಮಾರಿಗೆ ಬಾರಾಮತಿಯ ವಿದ್ಯಾ ಪ್ರತಿಷ್ಠಾನದ ಕ್ರೀಡಾ ಮೈದಾನದಲ್ಲಿ ಅಂತ್ಯಸಂಸ್ಕಾರ ನಡೆಸಲಾಯಿತು. ಶಾಸಕರು, ಸಚಿವರು ಅಗಲಿದ ನಾಯಕನಿಗೆ ಅಂತಿಮ ನಮನ ಸಲ್ಲಿಸಿದರು.

ಬೆಂಗಳೂರು: ರವೀಂದ್ರ ಕಲಾಕ್ಷೇತ್ರದಲ್ಲಿ ಸಾಲುಮರದ ತಿಮ್ಮಕ್ಕ ದರ್ಶನಕ್ಕೆ ವ್ಯವಸ್ಥೆ; ಮಧ್ಯಾಹ್ನ ಜ್ಞಾನಭಾರತಿ ಕ್ಯಾಂಪಸ್ನ ಕಲಾಗ್ರಾಮದಲ್ಲಿ ಅಂತ್ಯಕ್ರಿಯೆ
ಇಂದು ಮಧ್ಯಾಹ್ನದವರೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ನಂತರ ಸಕಲ ಸರ್ಕಾರಿ ಗೌರವಗಳೊಂದಿಗೆ ಮಧ್ಯಾಹ್ನ ಜ್ಞಾನಭಾರತಿ ಕ್ಯಾಂಪಸ್ನ ಕಲಾಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಈ ವೇಳೆ ಸಿಎಂ, ಡಿಸಿಎಂ ಭಾಗಿಯಾಗಲಿದ್ದಾರೆ.

ಗದಗ-ಬೆಟಗೇರಿ: ಅಂತ್ಯಸಂಸ್ಕಾರಕ್ಕೆ ಸಿದ್ಧತೆ ನಡೆಸುತ್ತಿದ್ದಾಗ ಉಸಿರಾಡಿ ಅಚ್ಚರಿ ಮೂಡಿಸಿದ ವ್ಯಕ್ತಿ!
ಕುಟುಂಬಸ್ಥರು ಅಂತ್ಯಕ್ರಿಯೆಗೆ ಸಿದ್ಧತೆ ನಡೆಸಿದರು. ಆದರೆ ನಡುರಸ್ತೆಯಲ್ಲಿ ಏಕಾಏಕಿ ವ್ಯಕ್ತಿ ಉಸಿರಾಡಿ ಎಲ್ಲರಿಗೂ ಅಚ್ಚರಿಯುಂಟುಮಾಡಿದ್ದಾರೆ. ತಕ್ಷಣವೇ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಸಾರ್ವಜನಿಕ ದರ್ಶನ ನಡುವೆ SL ಭೈರಪ್ಪನವರ ಉಯಿಲು ಬಹಿರಂಗ: ಅಂತ್ಯ ಸಂಸ್ಕಾರ ವೇಳೆ ಗೊಂದಲ?
ಮೈಸೂರಿನ ಕಲಾಮಂದಿರ ಆವರಣದಲ್ಲಿ ಭೈರಪ್ಪ ಅವರ ಪಾರ್ಥಿವ ಶರೀರದ ಸಾರ್ವಜನಿಕ ದರ್ಶನದ ಸಂದರ್ಭದಲ್ಲಿ ನಾಟಕೀಯ ಬೆಳವಣಿಗೆಗಳು ನಡೆದವು.

Dr. SL Bhyrappa: ರವೀಂದ್ರ ಕಲಾಕ್ಷೇತ್ರದಲ್ಲಿ ಅಂತಿಮ ದರ್ಶನ; ಮಧ್ಯಾಹ್ನ ಮೈಸೂರಿಗೆ ಪಾರ್ಥಿವ ಶರೀರ ರವಾನೆ, ನಾಳೆ ಅಂತ್ಯಕ್ರಿಯೆ
ಇಂದು ಬೆಳಗ್ಗೆ 8 ಗಂಟೆಯ ನಂತರ ಬೆಂಗಳೂರು ಹಾಗೂ ಮೈಸೂರಿನಲ್ಲಿ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಭೈರಪ್ಪ ಅವರ ಅಭಿಮಾನಿಗಳು ಮತ್ತು ಸಾಹಿತ್ಯ ಪ್ರೇಮಿಗಳು ರವೀಂದ್ರ ಕಲಾಕ್ಷೇತ್ರಕ್ಕೆ ಬಂದು ಅಂತಿಮ ದರ್ಶನ ಪಡೆಯಬೇಕೆಂದು ಅವರ ಕುಟುಂಬಸ್ಥರು, ಅವರ ಅನುಯಾಯಿಗಳು ಮನವಿ ಮಾಡಿದ್ದಾರೆ.

ಮಲ್ಲೇಶ್ವರಂ 11ನೇ ಕ್ರಾಸ್ ಗೆ ನಟಿ ಸರೋಜಾ ದೇವಿ ಹೆಸರಿಡಲು ಚಿಂತನೆ; ಅಂತಿಮ ದರ್ಶನ ಪಡೆದ ಸಿಎಂ ಸಿದ್ದರಾಮಯ್ಯ; ಸರ್ಕಾರಿ ಗೌರವಗಳೊಂದಿಗೆ ಹುಟ್ಟೂರು ದಶವಾರದಲ್ಲಿ ಅಂತ್ಯಕ್ರಿಯೆ
ಈಗಾಗಲೇ ಪಾರ್ಥಿವ ಶರೀರ ಬೆಂಗಳೂರಿನ ಮಲ್ಲೇಶ್ವರ 11ನೇ ಕ್ರಾಸಿನ ನಿವಾಸದಿಂದ ಹುಟ್ಟೂರಿನತ್ತ ಸಾಗಿದೆ. ತಮ್ಮ ದೇಹವನ್ನು ಹೂತಿಡಬೇಕೆಂದು ಹೇಳಿದ್ದರಿಂದ ಅವರ ಇಚ್ಛೆಯಂತೆ ಅಂತ್ಯಸಂಸ್ಕಾರ ನೆರವೇರಿಸಲಾಗುತ್ತದೆ ಎಂದು ಅವರ ಪುತ್ರ ಗೌತಮ್ ತಿಳಿಸಿದ್ದಾರೆ.

ಹುಬ್ಬಳ್ಳಿ ಬಾಲಕಿ ಕೊಲೆ ಪ್ರಕರಣ: 20 ದಿನಗಳ ಬಳಿಕ ಆರೋಪಿಯ ಅಂತ್ಯಸಂಸ್ಕಾರ
ಏ. 13ರಂದು ರಿತೇಶ ಕುರ್ಮಾ ಐದು ವರ್ಷದ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ, ಬಳಿಕ ಆಕೆಯನ್ನು ನಿರ್ಮಾಣ ಹಂತದ ಕಟ್ಟಡದ ಶೌಚಾಲಯ ದೊಳಗೆ ಹತ್ಯೆ ಮಾಡಿ ಪರಾರಿಯಾಗಿದ್ದ.

ನೆಲಮಂಗಲ ಅಪಘಾತದಲ್ಲಿ ಮೃತಪಟ್ಟ ಚಂದ್ರಮ್ ಕುಟುಂಬಸ್ಥರ ಆಕ್ರಂದನ; ಹುಟ್ಟೂರು ಮಹಾರಾಷ್ಟ್ರದ ಮೊರಬಗಿಯಲ್ಲಿ ಅಂತ್ಯಕ್ರಿಯೆ
ಬೆಂಗಳೂರಿನ ಎಚ್.ಎಸ್.ಆರ್. ಬಡಾವಣೆಯಲ್ಲಿ ವಾಸವಾಗಿದ್ದ ಚಂದ್ರಮ್ ಐಎಎಸ್ಟಿ ಸಾಫ್ಟ್ವೇರ್ ಸಲ್ಯೂಷನ್ ಕಂಪೆನಿ ನಡೆಸುತ್ತಿದ್ದರು.

