film production

ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಈಗ ಸಿನಿಮಾ ನಿರ್ಮಾಪಕಿ, ಮೊದಲ ನಿರ್ಮಾಣ ಚಿತ್ರದ ಟೀಸರ್ ಬಿಡುಗಡೆ
‘ಅಣ್ಣಾ ಫ್ರಂ ಮೆಕ್ಸಿಕೊ’ ಸಿನಿಮಾನಲ್ಲಿ ಡಾಲಿ ಧನಂಜಯ್ ನಾಯಕ ಆಗಿದ್ದು, ಈ ಹಿಂದೆ ಡಾಲಿಯ ‘ಬಡವ ರಾಸ್ಕಲ್’ ಸಿನಿಮಾ ನಿರ್ದೇಶಿಸಿದ್ದ ಶಂಕರ್ ಗುರು ಅವರು ಈ ಸಿನಿಮಾವನ್ನೂ ನಿರ್ದೇಶಿಸಲಿದ್ದಾರೆ.

ತರುಣ್ ಸುಧೀರ್ ನಿರ್ಮಾಣದ ಮುಂದಿನ ಚಿತ್ರಕ್ಕೆ ಪುನೀತ್ ರಂಗಸ್ವಾಮಿ ನಿರ್ದೇಶನ
ಪುನೀತ್ ರಂಗಸ್ವಾಮಿ ಅವರು ಈ ಹಿಂದೆ ತರುಣ್ ಸುಧೀರ್ ಜೊತೆ ಕಾಟೇರಾದಲ್ಲಿ ಜನಪ್ರಿಯ 'ರೈತ' ಹಾಡು ಮತ್ತು ಗುರು ಶಿಷ್ಯರಲ್ಲಿ 'ಆಣೆ ಮಾಡಿ ಹೇಳುತ್ತೇನೆ' ಹಾಡಿಗೆ ಸಾಹಿತ್ಯ ಬರೆದಿದ್ದರು.

ಸೆಟ್ಟೇರಿದ ನಿವೇದಿತಾ ಶಿವರಾಜ್‌ಕುಮಾರ್ ನಿರ್ಮಾಣದ ಮೊದಲ ಸಿನಿಮಾ 'ಫೈರ್ ಫ್ಲೈ'; ಚಿತ್ರಕ್ಕೆ ಶಿವಣ್ಣ ದಂಪತಿ ಹಾರೈಕೆ
ಶಿವರಾಜಕುಮಾರ್ ಅವರ ಕಿರಿಯ ಪುತ್ರಿ ನಿವೇದಿತಾ ಶಿವರಾಜಕುಮಾರ್ ಅವರು ತಮ್ಮ ಚೊಚ್ಚಲ ಸಿನಿಮಾ 'ಫೈರ್ ಫ್ಲೈ' ಎಂಬ ಶೀರ್ಷಿಕೆಯೊಂದಿಗೆ ಚಲನಚಿತ್ರ ನಿರ್ಮಾಣದಲ್ಲಿ ಹೊಸ ಪ್ರಯಾಣವನ್ನು ಆರಂಭಿಸಿದ್ದಾರೆ. ಯುವ ನಿರ್ಮಾಪಕಿಯಾಗಿ, ಅವರು ಈ ಹಿಂದೆ ಶ್ರೀ ಮುತ್ತು ಸಿನಿ ಸರ್ವಿಸಸ್ ಬ್ಯಾನರ್ ಅಡಿಯಲ್ಲಿ ವೆಬ್ ಸರಣಿಗಳನ್ನು ನಿರ್ಮಿಸಿದ್ದರು.

ನಟ ಶಿವರಾಜ್‌ಕುಮಾರ್ ಪುತ್ರಿ ನಿವೇದಿತಾ ಚಿತ್ರ ನಿರ್ಮಾಣಕ್ಕೆ ಮುಂದು
ನಟ ಶಿವರಾಜ್ ಕುಮಾರ್ ಅವರ ಪುತ್ರಿ ನಿವೇದಿತಾ ಅವರು ಧಾರಾವಾಹಿ ಮತ್ತು ಮೂರು ವೆಬ್ ಸರಣಿಗಳನ್ನು (ಹನಿಮೂನ್, ಬೈ ಮಿಸ್ಟೇಕ್ ಮತ್ತು ಹೇಟ್ ಯು ರೋಮಿಯೋ) ನಿರ್ಮಿಸಿದ್ದಾರೆ. ಅವರು ಇದೀಗ 'ಶ್ರೀ ಮುತ್ತು ಸಿನಿ ಸರ್ವಿಸಸ್ ಬ್ಯಾನರ್' ಅಡಿಯಲ್ಲಿ ಸಿನಿಮಾ ನಿರ್ಮಾಣದೊಂದಿಗೆ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ.

ಸಿನಿಮಾ ನಿರ್ಮಾಣಕ್ಕೆ ಮುಂದಾದ ವಿನಯ್, ಚಾಲೆಂಜಿಂಗ್ ಸ್ಟಾರ್ ದರ್ಶನ್ ರಿಂದ ಲಾಂಚ್
ಬಾಲ್ಯದಿಂದಲೂ ಸಿನಿಮಾದ ಬಗ್ಗೆ ಹೆಚ್ಟು ಉತ್ಸಾಹ ಹೊಂದಿದ್ದ ಉದ್ಯಮಿ ವಿನಯ್ ವಿ ಅವರು ಈಗ ಯುವ ಉತ್ಸಾಹಿ ನಿರ್ಮಾಪಕರ ಪಟ್ಟಿಗೆ ಹೊಸದಾಗಿ ಸೇರ್ಪಡೆಗೊಂಡಿದ್ದಾರೆ.

