Fight Against Corona

ಕೊರೋನಾ ವಿರುದ್ಧ ಸಮರ: 50 ಲಕ್ಷ ದೇಣಿಗೆ ನೀಡಿದ ಮಂಡ್ಯ ಸಂಸದೆ ಸುಮಲತಾ ಅಂಬರೀಶ್
ಮಂಡ್ಯ ಸಂಸದೆ, ನಟಿ ಸುಮಲತಾ ಅಂಬರೀಶ್ ತಾವು ಕೊರೋನಾ ವಿರುದ್ಧ ಹೋರಾಟಕ್ಕೆ ಕೈಜೋಡಿಸಿದ್ದು 50 ಲಕ್ಷ ರೂ ದೇಣಿಗೆ ನೀಡಿದ್ದಾರೆ ಮಾತ್ರವಲ್ಲದೆ ಪ್ರಧಾನ ಮಂತ್ರಿಗಳ ತುರ್ತು ಪರಿಹಾರ ನಿಧಿಗೆ ಎರಡು ತಿಂಗಳ ವೇತನವನ್ನು 2,00,000 ರೂ. ಮತ್ತು ಕರ್ನಾಟಕ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಎರಡು ತಿಂಗಳ ವೇತನವನ್ನು 2,00,000 ರೂ ನೀಡಿದ್ದಾರೆ.

ಕೊರೊನಾ ವಿರುದ್ಧ ಸಮರ: 3 ತಿಂಗಳ ವೇತನ ದೇಣಿಗೆ ಕೊಟ್ಟ ಶಾಸಕ ಯತ್ನಾಳ್, ತಿಂಗಳ ವೇತನ ನೀಡಿದ ಸಂಸದ ಜೋಶಿ
ಮಾಜಿ ಕೇಂದ್ರ ಸಚಿವ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕೊರೋನಾ ವಿರುದ್ಧ ಹೋರಾಟಕ್ಕೆ ಸಹಾಯಹಸ್ತ ಚಾಚಿದ್ದು ತಮ್ಮ ಮೂರು ತಿಂಗಳ ವೇಟನವನ್ನು ಮುಖ್ಯಮಂತ್ರಿಗಳ ಪ್ರಕೃತಿ ವಿಕೋಪ ಪರಿಹಾರ ನಿಧಿಗೆ ನೀಡಿದ್ದಾರೆ.

