ದೇಶಪಾರ್ಲಿಮೆಂಟ್ ಕಡೆಗೆ ರೈತರ ಬೃಹತ್ ಪ್ರತಿಭಟನಾ ಮೆರವಣಿಗೆ: ದೆಹಲಿ-ನೋಯ್ಡಾ ಗಡಿ ಬಂದ್!
ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತ್ರಿ, ರೈತರಿಗೆ ಪಿಂಚಣಿ ಮತ್ತು ಬೆಳೆ ವಿಮೆ ಸೇರಿದಂತೆ ಮತ್ತಿತರ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪಾರ್ಲಿಮೆಂಟ್ ನತ್ತ ರೈತರ ಬೃಹತ್ ಪ್ರತಿಭಟನಾ ಮೆರವಣಿಗೆ ಸಾಗುತ್ತಿದೆ. ಸಾವಿರಾರು ರೈತರು ಮತ್ತು ಹಳ್ಳಿಗರು ಮೆರವಣಿಗೆಯಲ್ಲಿ ತೆರಳುತ್ತಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ದೆಹಲಿ-ನೋಯ್ಡಾ ಗಡಿ ಬಂದ್ ಮಾಡಲಾಗಿದೆ.