Farmer Died

ಬೆಳಗಾವಿ: ಕೃಷಿ ಕೆಲಸ ಮುಗಿಸಿ ನದಿಯಲ್ಲಿ ಸ್ನಾನ ಮಾಡಲು ತೆರಳಿದ್ದಾಗ ಮೊಸಳೆ ದಾಳಿ; ರೈತ ಬಲಿ
ಚಿಕ್ಕೋಡಿ ತಾಲ್ಲೂಕಿನ ದತ್ತವಾಡ-ಸದಲಗಾ ಬಳಿಯ ದೂಧ್‌ಗಂಗಾ ನದಿ ದಡದಲ್ಲಿ ಶನಿವಾರ ಮೊಸಳೆ ದಾಳಿಗೆ ವೃದ್ಧ ರೈತ ಮೃತಪಟ್ಟಿದ್ದಾರೆ. ಮೃತ ರೈತನನ್ನು ಚಿಕ್ಕೋಡಿ ತಾಲ್ಲೂಕಿನ ಸದಲಗಾ ಗ್ರಾಮದ ನಿವಾಸಿ ಮಹಾದೇವ ಪುನ್ನಪ್ಪ ಖುರೆ (72) ಎಂದು ಗುರುತಿಸಲಾಗಿದೆ.

ಪ್ರತಿಭಟನಾನಿರತ ರೈತ ಸಾವು; ಎಫ್‌ಐಆರ್ ದಾಖಲು, ಇಂದು ಶುಭಕರನ್ ಅಂತ್ಯಕ್ರಿಯೆ: ರೈತ ಮುಖಂಡ
ಪೊಲೀಸರು ಪ್ರಕರಣದಲ್ಲಿ ಎಫ್‌ಐಆರ್ ದಾಖಲಿಸಿರುವುದರಿಂದ ಪ್ರತಿಭಟನೆಯ ವೇಳೆ ಸಾವಿಗೀಡಾಗಿದ್ದ ಶುಭಕರನ್ ಸಿಂಗ್ ಅವರ ಅಂತ್ಯಕ್ರಿಯೆಯನ್ನು ಗುರುವಾರ ನಡೆಸಲಾಗುವುದು ಎಂದು ಪಂಜಾಬ್ ಕಿಸಾನ್ ಮಜ್ದೂರ್ ಸಂಘರ್ಷ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಸರ್ವಾನ್ ಸಿಂಗ್ ಪಂಧೇರ್ ಗುರುವಾರ ಹೇಳಿದ್ದಾರೆ.

ಪಂಜಾಬ್; ಖಾನೌರಿ ಗಡಿಯಲ್ಲಿ ಪ್ರತಿಭಟನಾನಿರತ ಮತ್ತೊಬ್ಬ ರೈತ ಸಾವು: ಮೃತರ ಸಂಖ್ಯೆ ನಾಲ್ಕಕ್ಕೆ ಏರಿಕೆ
ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ನಡೆಯುತ್ತಿರುವ ದೆಹಲಿ ಚಲೋ ಪ್ರತಿಭಟನೆ ವೇಳೆ ಖಾನೌರಿ ಗಡಿಯಲ್ಲಿ ಮತ್ತೋರ್ವ ಪ್ರತಿಭಟನಾನಿರತ ರೈತ ಸಾವಿಗೀಡಾಗಿದ್ದು, ಮೃತ ರೈತರ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಿದೆ ಎಂದು ರೈತ ಮುಖಂಡ ಸರ್ವಾನ್ ಸಿಂಗ್ ಪಂಧೇರ್ ಶುಕ್ರವಾರ ತಿಳಿಸಿದ್ದಾರೆ.

ಬೆಳಗಾವಿ: ಹೊಲದಲ್ಲಿ ಕೆಲಸ ಮಾಡುತ್ತಿದ್ದ ರೈತನ ಮೇಲೆ ದಾಳಿ ಮಾಡಿ, ಶವವನ್ನು ಕಾಡಿಗೆ ಎಳೆದೊಯ್ದ ಕರಡಿ!
ಹೊಲದಲ್ಲಿ ಕೆಲಸ ಮಾಡುವಾಗ ಕರಡಿ ದಾಳಿಗೆ ಸಿಲುಕಿ ರೈತ ಸಾವಿಗೀಡಾಗಿರುವ ಘಟನೆ ಸೋಮವಾರ ಬೆಳಗಾವಿ ಜಿಲ್ಲೆಯ ಖಾನಾಪುರ ಸಮೀಪದ ಘೋಶೆ ಬದ್ರುಕ ಗ್ರಾಮದಲ್ಲಿ ನಡೆದಿದೆ. ಮೃತ ರೈತನನ್ನು 63 ವರ್ಷದ ಭೀಕಾಜಿ ಮಿರಾಶಿ ಎಂದು ಗುರುತಿಸಲಾಗಿದೆ.

