ರಾಜಕೀಯಕಾಯ್ದೆ ದುರ್ಬಲಗೊಳಿಸಿ ರೈತರಿಗೆ ಮರಣಶಾಸನ ಬರೆಯಲು ಹೊರಟ ಕೇಂದ್ರ ಸರ್ಕಾರ: ಸುರ್ಜೇವಾಲ ಟೀಕಾಪ್ರಹಾರ
ಕೇಂದ್ರದ ಬಿಜೆಪಿ ನೇತೃತ್ವದ ಪ್ರಧಾನಿ ನರೇಂದ್ರಮೋದಿ ಸರ್ಕಾರ ಕೃಷಿ ಸಂಬಂಧಿತ ಕಾಯ್ದೆಗಳ ಮೂಲ ಸ್ವರೂಪವನ್ನೇ ತಿದ್ದುಪಡಿ ಮಾಡುವ ಮೂಲಕ ಅಂಬಾನಿ-ಅದಾನಿಗಳಿಗೆ ಅನುಕೂಲ ಮಾಡಿ ರೈತರಿಗೆ ಮರಣ ಶಾಸನ ಬರೆಯಲು ಮುಂದಾಗಿದೆ ಎಂದು ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಆರೋಪಿಸಿದ್ದಾರೆ.