ರಾಜ್ಯಪುನೀತ್ ರಾಜ್ ಕುಮಾರ್ ನಿಧನ: 5 ದಿನದಲ್ಲಿ ಕನಿಷ್ಠ 13 ಮಂದಿ ಅಭಿಮಾನಿಗಳ ಸಾವು, ಶಿವಣ್ಣ ಹೇಳಿದ್ದೇನು?
ನಟ ಪುನೀತ್ ರಾಜ್ಕುಮಾರ್ ಅವರ ಸಾವಿನಿಂದ ಆಘಾತಗೊಂಡಿರುವ ಅವರ ಅಭಿಮಾನಿಗಳ ಸಾವಿನ ಸರಣಿ ಮುಂದುವರೆದಿದ್ದು, ಕಳೆದ 5 ದಿನಗಳ ಅವಧಿಯಲ್ಲಿ ಆತ್ಮಹತ್ಯೆ ಮತ್ತು ಹೃದಯಾಘಾತ ಪ್ರಕರಣಗಳೂ ಸೇರಿದಂತೆ ಕನಿಷ್ಠ 13 ಮಂದಿ ಸಾವಿಗೀಡಾಗಿದ್ದಾರೆ ಎಂದು ತಿಳಿದುಬಂದಿದೆ.