ರಾಜ್ಯರೈಲು ನಿಲ್ದಾಣದ ಮಳಿಗೆಗಳ ಮೇಲೆ ಆಹಾರ ಇಲಾಖೆ ದಿಢೀರ್ ದಾಳಿ: ಅವಧಿ ಮೀರಿದ ಉತ್ಪನ್ನಗಳು, ನಿಷೇಧಿತ ಬಣ್ಣಗಳು ಪತ್ತೆ!
ಕರ್ನಾಟಕದ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯು 36 ರೈಲು ನಿಲ್ದಾಣಗಳಲ್ಲಿರುವ ಆಹಾರ ಮಳಿಗೆಗಳಲ್ಲಿ ನಡೆಸಿದ ವಿಶೇಷ ತಪಾಸಣೆಯಲ್ಲಿ ಸಿಹಿತಿಂಡಿಗಳಲ್ಲಿ ಅನುಮತಿಯಿಲ್ಲದ ಬಣ್ಣಗಳ ಬಳಕೆ, ಅವಧಿ ಮೀರಿದ ಡೈರಿ ಉತ್ಪನ್ನಗಳು ಮತ್ತು ಆಹಾರ ಪದಾರ್ಥಗಳು ಮತ್ತು ಕೊಳೆತ ತರಕಾರಿಗಳು ಪತ್ತೆಯಾಗಿದೆ.