ವಿಶೇಷಮಕ್ಕಳಲ್ಲಿ ಪ್ರಕೃತಿ ಮೇಲಿನ ಪ್ರೀತಿ ಹುಟ್ಟುಹಾಕಿದ ದಿನಗೂಲಿ ಕಾರ್ಮಿಕನಿಗೆ 'ಪರಿಸರ ಸಂರಕ್ಷಣೆ ಪ್ರಶಸ್ತಿ'!
ತಂಗಾಳಿಯಲ್ಲಿ ಹಾರಾಡುವ ಬಣ್ಣಬಣ್ಣದ ಹೂವುಗಳು ಇವರನ್ನು ಬಾಲ್ಯದಲ್ಲಿಯೇ ಪ್ರಕೃತಿ ಮಾತೆಯತ್ತ ಹತ್ತಿರವಾಗವಂತೆ ಮಾಡಿತ್ತು. ಪ್ರಕೃತಿ ಎಂಬ ಪ್ರೀತಿಗೆ ಬಿದ್ದಿದ್ದ ಇವರು, ರಸ್ತೆಬದಿ ಮತ್ತು ಖಾಲಿ ಭೂಮಿಯ ಉದ್ದಕ್ಕೂ ಬೀಜಗಳು ಮತ್ತು ಸಸಿಗಳನ್ನು ನೆಡಲು ಆರಂಭಿಸಿದ್ದರು. ಇದು ಇಂದಿಗೂ ಇವರ ಜೀವನದಲ್ಲಿ ಒಂದು ಅಭ್ಯಾಸವಾಗಿ ಹೋಗಿದೆ.