ರಾಜ್ಯಬಳ್ಳಾರಿ: ಭಾರತ್ ಜೋಡೋ ಯಾತ್ರೆ ವೇಳೆ ವಿದ್ಯುತ್ ಪ್ರವಹಿಸಿ ಐವರು ಕಾರ್ಯಕರ್ತರಿಗೆ ಗಾಯ, ಪರಿಹಾರ ಘೋಷಣೆ
ಕಾಂಗ್ರೆಸ್ ನ ಭಾರತ್ ಜೋಡೋ ಯಾತ್ರೆ ವೇಳೆ ಅವಘಡವೊಂದು ಸಂಭವಿಸಿದೆ. ಬಳ್ಳಾರಿ ಗ್ರಾಮಾಂತರ ಭಾಗದ ಮೋಕ ಎಂಬಲ್ಲಿ ನಡೆದ ‘ಜೋಡೋ’ಯಾತ್ರೆಯಲ್ಲಿ(Bharat Jodo Yatra) ಕಾರ್ಯಕರ್ತರಿಗೆ ಕರೆಂಟ್ ಶಾಕ್ ಹೊಡೆದಿದೆ. ಕಬ್ಬಿಣದ ಪೈಪ್ನಲ್ಲಿ ಬಾವುಟ ಹಿಡಿದು ಹೋಗುವಾಗ ಕಬ್ಬಿಣದ ಪೈಪ್ಗೆ ವಿದ್ಯುತ್ ತಂತಿ ತಗುಲಿ ಐವರು ಕಾಂಗ್ರೆಸ್ ಕಾರ್ಯಕರ್ತರಿಗೆ ಕರೆಂಟ್ ಶಾಕ್ ಹೊಡೆದಿದೆ.