ದೇಶತ್ರಿಪುರಾ ವಿಧಾನಸಭೆ ಚುನಾವಣೆ: ಬೆಳಗ್ಗೆ 9 ಗಂಟೆ ವರೆಗೆ ಶೇ.14 ಮತದಾನ
ತ್ರಿಪುರಾದಲ್ಲಿ ಗುರುವಾರ ಬೆಳಗ್ಗೆ 9 ಗಂಟೆಯವರೆಗೆ ಶೇ.14ರಷ್ಟು ಮತದಾನವಾಗಿದ್ದು, ಮೊದಲ ಎರಡು ಗಂಟೆಗಳಲ್ಲಿ ಮತದಾನ ಪ್ರಕ್ರಿಯೆ ಬಹುತೇಕ ಶಾಂತಿಯುತವಾಗಿತ್ತು ಎಂದು ಮುಖ್ಯ ಚುನಾವಣಾಧಿಕಾರಿ (CEO) ಗಿಟ್ಟೆ ಕಿರಣ್ಕುಮಾರ್ ದಿನಕರರಾವ್ ಹೇಳಿದ್ದಾರೆ. ಬೆಳಗ್ಗೆ 7 ಗಂಟೆಗೆ ಆರಂಭವಾದ ಮತದಾನ ಕಾರ್ಯ ಸಂಜೆ 4ರವರೆಗೆ ಮುಂದುವರಿಯಲಿದೆ.