ರಾಜ್ಯಡಿಕೆಶಿ ಬಳಿಕ ಮತ್ತೊಬ್ಬ ಮಾಜಿ ಸಚಿವರಿಗೆ ಇಡಿ ಕುಣಿಕೆ: ಕೆಜೆ ಜಾರ್ಜ್ ವಿರುದ್ಧ 'ಫೆಮಾ' ಉಲ್ಲಂಘನೆ ಪ್ರಕರಣ?
ಹಿರಿಯ ಕಾಂಗ್ರೆಸ್ ಮುಖಂಡ ಮತ್ತು ಸರ್ವಜ್ಞನಗರ ಶಾಸಕ ಕೆ.ಜೆ.ಜಾರ್ಜ್ ವಿರುದ್ಧ ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (ಫೆಮಾ) ಉಲ್ಲಂಘನೆ ಪ್ರಕರಣ ದಾಖಲಿಸಲು ಬೆಂಗಳೂರು ವಲಯ ಘಟಕ ಜಾರಿ ನಿರ್ದೇಶನಾಲಯ (ಇಡಿ) ಚಿಂತನೆ ನಡೆಸಿದೆ.