ರಾಜ್ಯಆಗಸ್ಟ್ 23 ರಿಂದ ಶಾಲೆ ಆರಂಭ; ಇನ್ನೂ ಮುದ್ರಣಗೊಳ್ಳದ ಪುಸ್ತಕಗಳು, ಸಂಕಷ್ಟದಲ್ಲಿ ವಿದ್ಯಾರ್ಥಿಗಳು!
ರಾಜ್ಯದಲ್ಲಿ ಆ. 23 ರಿಂದ 9, 10ನೇ ತರಗತಿ ಶಾಲೆ ಆರಂಭಿಸಲು ಶಿಕ್ಷಣ ಇಲಾಖೆ ನಿರ್ಧರಿಸಿದೆ. ಆದರೆ, ಕೋವಿಡ್ ಹಿನ್ನೆಲೆಯಲ್ಲಿ ಪಠ್ಯಪುಸ್ತಗಳ ಮುದ್ರಣಗಳು ವಿಳಂಬವಾಗುತ್ತಿದ್ದು, ಶೈಕ್ಷಣಿಕ ವರ್ಷ ಆರಂಭವಾಗಿ ತಿಂಗಳುಗಳು ಕಳೆದರೂ ಇನ್ನೂ ಪುಸ್ತಕಗಳು ಕೈ ಸೇರದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ.