ದೇಶಬಿಜೆಪಿ ಸೇರದಿದ್ದರೆ ED ತನ್ನನ್ನು ಸೇರಿ ಇತರ 3 AAP ನಾಯಕರನ್ನು ಬಂಧಿಸಲಿದೆ: ದೆಹಲಿ ಸಚಿವೆ ಅತಿಶಿ
ಬಿಜೆಪಿ ಸೇರುವಂತೆ ನನ್ನ ಆಪ್ತರ ಮೂಲಕ ನನ್ನನ್ನು ಸಂಪರ್ಕಿಸಲಾಗಿದ್ದು, ಬಿಜೆಪಿಗೆ ಸೇರದೆ ಹೋದರೆ ಮುಂದಿನ ದಿನಗಳಲ್ಲಿ ಜಾರಿ ನಿರ್ದೇಶನಾಲಯ (ಇ.ಡಿ) ಎಎಪಿ ನಾಯಕರಾದ ಸೌರಭ್ ಭಾರದ್ವಾಜ್, ದುರ್ಗೇಶ್ ಪಾಠಕ್ ಮತ್ತು ರಾಘವ್ ಚಡ್ಡಾ ಅವರೊಂದಿಗೆ ನನ್ನನ್ನು ಬಂಧಿಸುವ ಸಾಧ್ಯತೆಯಿದೆ ಎಂದು ದೆಹಲಿ ಸಚಿವೆ ಅತಿಶಿ ಮಂಗಳವಾರ ಹೇಳಿದ್ದಾರೆ.