ರಾಜ್ಯ'ನಮ್ಮನ್ನು ಕುಡುಕರು ಎಂದು ಕರೆಯಬೇಡಿ, ಮದ್ಯ ಪ್ರಿಯರು ಅನ್ನಿ', ಮದ್ಯಪಾನ ಪ್ರಿಯರ ಸಂಘದ ಸದಸ್ಯರ ಬೇಡಿಕೆ ಹೀಗಿದೆ....
ಹೆಸರಲ್ಲೇನಿದೆ ಎಂದು ನೀವು ಕೇಳುತ್ತೀರಾ, ಖಂಡಿತಾ ಇದೆ, ಇಲ್ಲಿ ನೋಡಿ, ಇವರನ್ನು ಆ ಹೆಸರಿನಿಂದ ಕರೆದರೆ ಬೇಸರವಾಗುತ್ತದಂತೆ, ಹಾಗಂತ ಪ್ರತಿಭಟನೆ ನಡೆಸಿ ಸರ್ಕಾರದ ಜನಪ್ರತಿನಿಧಿಗಳ ಗಮನ ಸೆಳೆಯಲು ಪ್ರಯತ್ನಿಸಿದವರು 'ಕರ್ನಾಟಕ ಮದ್ಯಪಾನ ಪ್ರಿಯರ ಹೋರಾಟಗಾರರ ಸಂಘ'ದ ಸದಸ್ಯರು.