ರಾಜ್ಯಮಂಗಳೂರು: ಮಾದಕ ವಸ್ತು ಮಾರಾಟಕ್ಕೆ ಯತ್ನ; ಇಬ್ಬರ ಬಂಧನ, 57,000 ರೂ. ಮೌಲ್ಯದ ಡ್ರಗ್ಸ್ ವಶ
ಮಾದಕ ವಸ್ತು ಮಾರಾಟಕ್ಕೆ ಯತ್ನಿಸಿದ ಇಬ್ಬರನ್ನು ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ಬೊಂದೇಲ್ ಮೈದಾನದಲ್ಲಿ ಮಂಗಳೂರು ಉತ್ತರ ವಿಭಾಗದ ಡ್ರಗ್ ಸ್ಕ್ವಾಡ್ ಶುಕ್ರವಾರ ಬಂಧಿಸಿದೆ. ಬಂಧಿತರಿಂದ 57,000 ರೂಪಾಯಿ ಮೌಲ್ಯದ 19 ಗ್ರಾಂ ಡ್ರಗ್ಸ್ ನ್ನು ವಶಕ್ಕೆ ಪಡೆಯಲಾಗಿದೆ.