ವಿದೇಶಮಾಸ್ಕ್ ಧರಿಸಿ ಎಂದ ಬಸ್ ಚಾಲಕನ ಪ್ರಾಣ ತೆಗೆದ ಮೂವರು ಪ್ರಯಾಣಿಕರು!
ಬಸ್ ಏರಿದ ಪ್ರಯಾಣಿಕರಿಗೆ ಮುಖ ಗವುಸು ಧರಿಸಲು ಸೂಚಿಸಿದ ಬಸ್ ಚಾಲಕನ ಮೇಲೆ ಕುಪಿತಗೊಂಡ ಮೂವರು ಕಬ್ಬಿಣದ ರಾಡುಗಳಿಂದ ಮನಸೋಇಚ್ಚೆ ಥಳಿಸಿದರು. ಇದರಿಂದ ತೀವ್ರ ಗಾಯಗೊಂಡ ಚಾಲಕ ಆಸ್ಪತ್ರೆಯಲ್ಲಿ ಶುಕ್ರವಾರ ಮೃತಪಟ್ಟಿದ್ದಾನೆ. ತಮ್ಮ ಒಳಿತಿಗಾಗಿ ಹೇಳಿದ್ದನ್ನು ಅರ್ಥ ಮಾಡಿಕೊಳ್ಳದೆ ವ್ಯಕ್ತಿಯ ಪ್ರಾಣವನ್ನು ತೆಗೆದ ಘಟನೆ ಫ್ರಾನ್ಸ್ ನಲ್ಲಿ ನಡೆದಿದೆ.