ರಾಜ್ಯಬೆಂಗಳೂರು: ವಿಷ ಕುಡಿಯುವಂತೆ ಪತ್ನಿಗೆ ಒತ್ತಾಯ, ಪತಿಯ ವಿರುದ್ಧ ಪ್ರಕರಣ ದಾಖಲು
ಪತಿ ಹಾಗೂ ಅತ್ತೆಯ ಬಲವಂತದಿಂದ ಖಾಸಗಿ ನರ್ಸಿಂಗ್ ಕಾಲೇಜ್ ವೊಂದರಲ್ಲಿ ಸಹಾಯಕ ಪ್ರೊಫೆಸರ್ ಆಗಿದ್ದ ಮಹಿಳೆಯೊಬ್ಬರು ವಿಷ ಕುಡಿದು ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿರುವ ಘಟನೆ ಜ್ಞಾನಭಾರತಿಯಲ್ಲಿ ನಡೆದಿದೆ. ಸಂತ್ರಸ್ತೆಯ ಪರಿಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ.