Dras

ಕಾರ್ಗಿಲ್ ವಿಜಯ ದಿವಸ್: ಲಡಾಕ್ ನ ದ್ರಾಸ್ ನಲ್ಲಿ ಯೋಧರ ಸ್ಮಾರಕಕ್ಕೆ ಪ್ರಧಾನಿ ಮೋದಿ ನಮನ; ರಕ್ಷಣಾ ಸಚಿವ ಭಾಗಿ
ಅಲ್ಲಿರುವ ಮ್ಯೂಸಿಯಂಗೆ ಭೇಟಿ ನೀಡಿದ ಪ್ರಧಾನ ಮಂತ್ರಿಗಳು ಕಾರ್ಗಿಲ್ ಯುದ್ಧ ಸಂದರ್ಭದಲ್ಲಿ ಬಳಸಿರುವ ಮಿಲಿಟರಿ ಉಪಕರಣಗಳು, ಭಾರತೀಯ ಸೇನೆಯ ಯುದ್ಧ ಸಲಕರಣೆಗಳು, ಹುತಾತ್ಮ ಯೋಧರ ಛಾಯಾಚಿತ್ರಗಳನ್ನು ವೀಕ್ಷಿಸಿದರು.

'ಕಾರ್ಗಿಲ್ ವಿಜಯ ದಿವಸ್' 25 ವರ್ಷ: ಇತಿಹಾಸದ ಮೆಲುಕು; ಯುದ್ಧ ಸ್ಮಾರಕಕ್ಕೆ ಪ್ರಧಾನಿ ಮೋದಿ ಇಂದು ಭೇಟಿ
ಜುಲೈ 14, 1999 ರಂದು ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಆಪರೇಷನ್ ವಿಜಯ್ ಯಶಸ್ವಿಯಾಗಿದೆ ಎಂದು ಘೋಷಿಸಿದರು. ಕಾರ್ಗಿಲ್ ಗಡಿ ನಿಯಂತ್ರಣ ರೇಖೆಯ (LC) ಭಾರತದ ಭಾಗದಲ್ಲಿ ಪಾಕಿಸ್ತಾನ ಸೇನೆ ಬೆಂಬಲಿತ ಶಸ್ತ್ರಸಜ್ಜಿತ ಭಯೋತ್ಪಾದಕರ ಅಪ್ರಚೋದಿತ ಒಳನುಗ್ಗುವಿಕೆಯಿಂದಾಗಿ 'ಆಪರೇಷನ್ ವಿಜಯ್' ಆರಂಭವಾಗಿತ್ತು.

ಪ್ರತಿಕೂಲ ಹವಾಮಾನ: ರಾಷ್ಟ್ರಪತಿ ಕೋವಿಂದ್ ಕಾರ್ಗಿಲ್ ಭೇಟಿ ರದ್ದು
ಕಾರ್ಗಿಲ್ ವಿಜಯ್ ದಿನದ 22 ನೇ ವಾರ್ಷಿಕೋತ್ಸವದಂದು ಡ್ರಾಸ್‌ನಲ್ಲಿರುವ ಭಾರತೀಯ ಸಶಸ್ತ್ರ ಪಡೆಗಳ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಲು ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಕೇಂದ್ರಾಡಳಿತ ಪ್ರದೇಶದ ಲಡಾಕ್‌ನ ಕಾರ್ಗಿಲ್‌ಗೆ ಭೇಟಿ ನೀಡುವ ಕಾರ್ಯಕ್ರಮ ಕೊನೆ ಘಳಿಗೆಯಲ್ಲಿ ಅದೂ ಪ್ರತಿಕೂಲ ಹವಾಮಾನದ ಕಾರಣ ರದ್ದಾಗಿದೆ.

ಡ್ರಾಸ್ ಗೆ ಜನರಲ್ ರಾವತ್ ಭೇಟಿ: ಭದ್ರತೆ, ಕಾರ್ಯಾಚರಣೆ ಸನ್ನದ್ಧತೆ ಪರಿಶೀಲನೆ
ರಕ್ಷಣಾ ಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಭಾನುವಾರ ಗಡಿ ಪಟ್ಟಣವಾದ ಡ್ರಾಸ್ ಗೆ ಭೇಟಿ ನೀಡಿ, ಕೇಂದ್ರಾಡಳಿತ ಪ್ರದೇಶ ಲಡಾಖ್ ನ ಗಡಿನಿಯಂತ್ರಣಾ ರೇಖೆಯಲ್ಲಿ ಭದ್ರತಾ ಪರಿಸ್ಥಿತಿ ಮತ್ತು ಕಾರ್ಯಾಚರಣೆ ಸನ್ನದ್ಧತೆಯನ್ನು ಪರಿಶೀಲಿಸಿದರು.

