ರಾಜ್ಯಸಿರಿಧಾನ್ಯಗಳ ಬೆಳೆಯುವಿಕೆಯಿಂದ ಜಾಗತಿಕ ತಾಪಮಾನ ತಗ್ಗಿಸಬಹುದು: ಪೌಷ್ಟಿಕತಜ್ಞ ಡಾ. ಖಾದರ್ ವಲಿ
ರೈತರು ಅಕ್ಕಿ, ಗೋಧಿ ಮತ್ತು ಕಬ್ಬು ಬೆಳೆಯುವುದನ್ನು ನಿಲ್ಲಿಸಿದರೆ 18 ವರ್ಷಗಳಲ್ಲಿ ಜಾಗತಿಕ ತಾಪಮಾನವನ್ನು ತಗ್ಗಿಸಬಹುದು. ಬದಲಿಗೆ ಸಿರಿಧಾನ್ಯಗಳನ್ನು ಬೆಳೆದರೆ ಪ್ರಪಂಚದಾದ್ಯಂತ 10.4 ಬಿಲಿಯನ್ ಮೆಟ್ರಿಕ್ ಟನ್ ಇಂಗಾಲದ ಡೈಆಕ್ಸೈಡ್ ಅನ್ನು ಕಡಿಮೆ ಮಾಡಬಹುದು ಎಂದು ಭಾರತದ ಮಿಲೆಟ್ ಮ್ಯಾನ್ ಎಂದೇ ಜನಪ್ರಿಯವಾಗಿರುವ ಪೌಷ್ಟಿಕತಜ್ಞ ಡಾ. ಖಾದರ್ ವಲಿ ಹೇಳಿದರು.