ರಾಜ್ಯಪರೀಕ್ಷೆ ಮುಗಿಯುವ ತನಕ ಹಾಸ್ಟೆಲ್ ವಿದ್ಯಾರ್ಥಿಗಳನ್ನು ಖಾಲಿ ಮಾಡಿಸಬಾರದು: ಡಾ. ಅಶ್ವತ್ ನಾರಾಯಣ
ಹಾಸ್ಟೆಲ್ನಲ್ಲಿದ್ದು, ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳನ್ನು ಪರೀಕ್ಷೆ ಮುಗಿಯುವ ತನಕ ಖಾಲಿ ಮಾಡಿಸಬಾರದು ಎಂದು ಉನ್ನತ ಶಿಕ್ಷಣ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ ನಾರಾಯಣ ಹೇಳಿದ್ದಾರೆ.