ರಾಜ್ಯಎರಡು ಗರ್ಭಕೋಶ ಹೊಂದಿದ ಮಹಿಳೆ: ಶಸ್ತ್ರಚಿಕಿತ್ಸೆ ನಂತರ ಶಿಶುವಿಗೆ ಜನನ
29 ವರ್ಷದ ಮಹಿಳೆಯೊಬ್ಬರು ಗರ್ಭಾಶಯ ಡಿಡೆಲ್ಫಿಸ್ (ಎರಡು ಗರ್ಭಾಶಯ) ಹೊಂದಿದ್ದು, ಈ ಹಿಂದೆ ನಾಲ್ಕು ಬಾರಿ ಗರ್ಭಪಾತವಾಗಿ ಈ ಬಾರಿ ಆರೋಗ್ಯಕರ ಮಗುವಿಗೆ ಜನ್ಮನೀಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನ ಆಸ್ಪತ್ರೆಯಲ್ಲಿ ಸಂಕೀರ್ಣ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆಗೆ ಒಳಗಾದ ನಂತರ ಆರೋಗ್ಯವಂತ ಮಗುವಿಗೆ ಜನ್ಮ ನೀಡಿದ್ದಾರೆ.