ರಾಜಕೀಯಅತೃಪ್ತಿ ಶಮನಕ್ಕೆ ಯತ್ನ: ಸಚಿವಕಾಂಕ್ಷಿಗಳಿಗೆ ನಿಗಮ -ಮಂಡಳಿ ಅಧ್ಯಕ್ಷ ಸ್ಥಾನ; 4 ಶಾಸಕರಿಂದ ರಿಜೆಕ್ಟ್
ಸಂಪುಟ ಪುನಾರಚನೆ ಕಾರ್ಯ ರಾಜ್ಯ ಸರ್ಕಾರದಲ್ಲಿ ಚುರುಕುಗೊಳ್ಳುತ್ತಿದ್ದು, ಈ ನಡುವೆ ಭುಗಿಲೇಳಲಿರುವ ಅತೃಪ್ತಿಯನ್ನು ಶಮನ ಮಾಡಲು ಯತ್ನಿಸಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರು, ಬಿಜೆಪಿ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದು ವರ್ಷ ಪೂರೈಸಿದ ಖುಷಿಯಲ್ಲಿಯೇ 24 ಮಂದಿ ಶಾಸಕರಿಗೆ ವಿವಿಧ ನಿಗಮ ಮಂಡಳಿಗಳ ಅಧ್ಯಕ್ಷ ನೀಡಿ ಆದೇಶ ಹೊರಡಿಸಿದ್ದಾರೆ.