ದೇಶದಿಶಾ 'ಹತ್ಯಾಚಾರ': ಎನ್ಕೌಂಟರ್ ಬೆನ್ನಲ್ಲೇ ಹಿರೋಗಳಾದ ಪೊಲೀಸರು, ರಾಖಿ ಕಟ್ಟಿ, ಸಿಹಿ ತಿನ್ನಿಸಿ, ಹೂಗಳ ಸುರಿಮಳೆ!
ಹೈದರಾಬಾದ್ ಪಶು ವೈದ್ಯೆ ದಿಶಾ ಹತ್ಯಾಚಾರ ಪ್ರಕರಣದ ಆರೋಪಿಗಳನ್ನು ಎನ್ಕೌಂಟರ್ ಮಾಡಿದ ತೆಲಂಗಾಣ ಪೊಲೀಸರ ಕಾರ್ಯಕ್ಕೆ ವ್ಯಾಪಕ ಶ್ಲಾಘನೆ ವ್ಯಕ್ತವಾಗುತ್ತಿದ್ದು, ಪಶು ವೈದ್ಯೆಯ ಅಕ್ಕಪಕ್ಕದ ಕಾಲನಿ ನಿವಾಸಿಗಳು ಇದೀಗ ಹೈದರಾಬಾದ್ ಪೊಲೀಸರಿಗೆ ರಾಖಿ ಕಟ್ಟಿ ಅವರ ಮೇಲೆ ಹೂವಿನ ಸುರಿಮಳೆ ಗೈದು ತಮ್ಮ ಅಭಿಮಾನ ತೋರಿಸುತ್ತಿದ್ದಾರೆ.