ಸಿನಿಮಾ ಸುದ್ದಿಪಾಪಾ ಪಾಂಡು ನಟ ಸೌರಭ್ ಕುಲಕರ್ಣಿ ನಿರ್ದೇಶನದಲ್ಲಿ 'ಸಿರಿ ಲಂಬೋದರ ವಿವಾಹ' ಸಿನಿಮಾ
ಪಾಪಾ ಪಾಂಡು ಖ್ಯಾತಿಯ ನಟ, ನಿರೂಪಕ ಸೌರಭ್ ಕುಲಕರ್ಣಿ ಮೊದಲ ಬಾರಿಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಸಿರಿ ಲಂಬೋದರ ವಿವಾಹ (ಎಸ್ ಎಲ್ ವಿ) ಎನ್ನುವ ಸಿನಿಮಾವನ್ನು ಅವರು ನಿರ್ದೇಶಿಸುತ್ತಿದ್ದಾರೆ. ಸೌರಭ್ ಅವರು ಕನ್ನಡದ ಹೆಸರಾಂತ ನಿರೂಪಕ ದಿ.ಸಂಜೀವ್ ಕುಲಕರ್ಣಿ ಅವರ ಪುತ್ರ.