ಸಿನಿಮಾ ಸುದ್ದಿ'ಸಿದ್ಲಿಂಗು 2' ಗಾಗಿ ಸಜ್ಜಾಗುತ್ತಿದ್ದಾರೆ ಲೂಸ್ ಮಾದ ಯೋಗಿ; ರಮ್ಯಾ ಪಾತ್ರದ ಕುರಿತು ವಿಜಯ್ ಪ್ರಸಾದ್ ಹೇಳಿದ್ದೇನು?
2012ರಲ್ಲಿ ತೆರೆಕಂಡ ಸಿದ್ಲಿಂಗು ಚಿತ್ರ ಹಿಟ್ ಆಗಿತ್ತು. ಇದೀಗ ಕೆಲ ದಿನಗಳಿಂದ ಚಿತ್ರದ ಸೀಕ್ವೆಲ್ ಬಗೆಗಿನ ವರದಿಗಳು ಹರಿದಾಡುತ್ತಿವೆ. ನಿರ್ದೇಶಕ ವಿಜಯ ಪ್ರಸಾದ್ ಅವರು ಸದ್ಯ ಸ್ಕ್ರಿಪ್ಟಿಂಗ್ನ ಅಂತಿಮ ಹಂತದಲ್ಲಿದ್ದು, ಈ ಸಿನಿಮಾವನ್ನು ಶೀಘ್ರವೇ ಅಧಿಕೃತವಾಗಿ ಘೋಷಿಸಲಿದ್ದಾರೆ ಎನ್ನಲಾಗಿದೆ.