ದೇಶ'ಜೈ ಭೀಮ್' ವಿವಾದ: ನಟ ಸೂರ್ಯ, ನಿರ್ದೇಶಕ ಜ್ಞಾನವೇಲ್ ರಾಜ ವಿರುದ್ಧದ ಎಫ್ ಐಆರ್ ರದ್ದುಪಡಿಸಿದ ಹೈಕೋರ್ಟ್
ತಮಿಳಿನ ಜೈಭೀಮ್ ಸಿನಿಮಾದಲ್ಲಿ ವಣ್ಣಿಯಾರ್ ಸಮುದಾಯವನ್ನು ತಪ್ಪಾಗಿ ತೋರಿಸಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ನಟ ಸೂರ್ಯ ಕುಮಾರ್ ಮತ್ತು ನಿರ್ದೇಶಕ ಜ್ಞಾನವೇಲ್ ರಾಜ ವಿರುದ್ಧ ದಾಖಲಾದ ಎಫ್ ಐಆರ್ ನ್ನು ಮದ್ರಾಸ್ ಹೈಕೋರ್ಟ್ ಗುರುವಾರ ರದ್ದುಪಡಿಸಿದೆ.