ಸಿನಿಮಾ ಸುದ್ದಿ'ಮುಗಿಲ್ಪೇಟೆ' ಚಿತ್ರ ನಿರ್ದೇಶಕರ ಹೊಸ ಸಿನಿಮಾದಲ್ಲಿ 'ಜೋಡಿ ಹಕ್ಕಿ' ಧಾರಾವಾಹಿ ಖ್ಯಾತಿಯ ತಾಂಡವ್ ರಾಮ್ ನಾಯಕ
ಮನೋರಂಜನ್ ಅಭಿನಯದ ಮುಗಿಲ್ಪೇಟೆ ಚಿತ್ರ ನಿರ್ದೇಶಿಸಿದ್ದ ಭರತ್ ಎಸ್ ನಾವುಂದ ಅವರು ತಮ್ಮ ಮುಂದಿನ ಯೋಜನೆಯನ್ನು ಕಿಕ್ಸ್ಟಾರ್ಟ್ ಮಾಡಲು ಸಜ್ಜಾಗುತ್ತಿದ್ದಾರೆ. ಚಿತ್ರ ಕನ್ನಡ-ತೆಲುಗು ದ್ವಿಭಾಷಾ ಚಿತ್ರವಾಗಲಿದ್ದು, ಕೌಟುಂಬಿಕ ಪ್ರತೀಕಾರದ ಕಥೆಯುಳ್ಳ ಸಿನಿಮಾವಾಗಿದೆ. ಪೂರ್ಣ ಪ್ರಮಾಣದ ನಾಯಕನಾಗಿ ತಾಂಡವ್ ರಾಮ್ ಎಂಟ್ರಿ ಕೊಡುತ್ತಿದ್ದಾರೆ.