ಬಾಲಿವುಡ್'ಬಾಲಿವುಡ್ ನಲ್ಲಿ ನನ್ನ ವಿರುದ್ಧ ಕೆಲಸ ಮಾಡುವ ದೊಡ್ಡ ಗುಂಪು ಇದೆ, ಸಾಕಷ್ಟು ಅವಕಾಶ ತಪ್ಪಿಹೋಗಿದೆ:ಎ ಆರ್ ರೆಹಮಾನ್
ಸುಶಾಂತ್ ಸಿಂಗ್ ರಜಪೂತ್ ಸಾವಿನ ಬಳಿಕ ಬಾಲಿವುಡ್ ನಲ್ಲಿ ಕಂಗನಾ ರಾನಾವತ್ ಸೇರಿದಂತೆ ಹಲವರಿಂದ ನೆಪೊಟಿಸಂ ಅಂದರೆ ಸ್ವಜನ ಪಕ್ಷಪಾತದ ಮಾತುಗಳು ಜೋರಾಗಿ ಕೇಳಿಬರುತ್ತಿದೆ. ಅನೇಕರು ತಮಗೆ ಅನ್ಯಾಯವಾಗಿದೆ ಮತ್ತು ಆಗುತ್ತಿದೆ, ತಮಗೆ ಅನೇಕ ಅವಕಾಶಗಳು ಬಾಲಿವುಡ್ ನಲ್ಲಿ ಕೈ ತಪ್ಪಿ ಹೋಗಿವೆ, ಇದಕ್ಕೆ ಅಲ್ಲಿನ ಗುಂಪುಗಾರಿಕೆಯೇ ಕಾರಣ ಎಂದು ಅನೇಕ ಕಲಾವಿದರು ಆರೋಪಿಸುತ್ತಿದ್ದಾರೆ