ವಿದೇಶಕೊರೋನಾವೈರಸ್ ಭೀತಿ: ಜಪಾನ್ ಹಡಗಿನಲ್ಲಿದ್ದ ಇಬ್ಬರು ಭಾರತೀಯರಲ್ಲಿ ಸೋಂಕು ಪತ್ತೆ
ಓರ್ವ ಕನ್ನಡಿಗ ಸೇರಿ 138 ಭಾರತೀಯರು ಹಾಗೂ 3700 ಪ್ರವಾಸಿಗರು ಇರುವ ಜಪಾನ್'ನ ಡೈಮಂಡ್ ಪ್ರಿನ್ಸೆಸ್ ಹಡಗಿನಲ್ಲಿ ಮತ್ತೆ 39 ಜನರಿಗೆ ಕೊರೋನಾ ಸೋಂಕು ತಗುಲಿದೆ. ಈ ಪೈಕಿ ಇಬ್ಬರು ಭಾರತೀಯರಿಗೂ ಸೋಂಕು ತಗುಲಿದೆ ಎಂದು ವರದಿಗಳು ತಿಳಿಸಿವೆ. ಇದರೊಂದಿಗೆ ಹಡಗಿನಲ್ಲಿ ಸೋಂಕು ಪೀಡಿತರ ಸಂಖ್ಯೆ 174ಕ್ಕೆ ಏರಿಕೆಯಾಗಿದೆ.