ರಾಜ್ಯಸೈಬರ್ ವಂಚನೆ; ಅಧಿಕ ಲಾಭದ ಆಮಿಷಕ್ಕೆ ಸಿಲುಕಿ 1.8 ಕೋಟಿ ರೂ. ಕಳೆದುಕೊಂಡ ಧಾರವಾಡದ ವೈದ್ಯ
ಧಾರವಾಡದ 45 ವರ್ಷದ ವೈದ್ಯರೊಬ್ಬರು ಸೈಬರ್ ವಂಚಕರ ಬಲೆಗೆ ಬಿದ್ದಿದ್ದು, ಬರೋಬ್ಬರಿ 1.79 ಕೋಟಿ ರೂ. ಕಳೆದುಕೊಂಡಿದ್ದಾರೆ. ಎರಡು ತಿಂಗಳ ಹಿಂದೆ ವೈದ್ಯರಿಗೆ ಅಪರಿಚಿತ ವ್ಯಕ್ತಿಯಿಂದ ಕರೆ ಬಂದಿದ್ದು, ವಂಚನೆ ನಡೆದಿರುವ ಬಗ್ಗೆ ಸೈಬರ್ ಕ್ರೈಂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.