ರಾಜ್ಯ'ಸಮಾಜದಲ್ಲಿ ಗೌರವಯುತವಾಗಿ ಬದುಕುವ ಹಕ್ಕು ನಮಗೂ ಕೊಡಿ': ದೇವದಾಸಿ ಮಕ್ಕಳ ಒಕ್ಕೊರಲ ಒತ್ತಾಯ
ನನ್ನ ತಾಯಿ, ಅಜ್ಜಿ ದೇವದಾಸಿಯಾಗಿದ್ದರು. ಆದರೆ ನನಗೆ ದೇವದಾಸಿ ಆಗಲು ಇಚ್ಛೆಯಿಲ್ಲ. ನನಗೆ ವಿಜ್ಞಾನ ಶಿಕ್ಷಕಿಯಾಗಬೇಕೆಂಬ ಆಸೆ. ಆದರೆ ನನ್ನ ಚಿಕ್ಕಪ್ಪ ಮತ್ತು ಅಜ್ಜಿ ನಾನು ಕೂಡ ದೇವದಾಸಿ ಆಗಬೇಕೆಂದು ಬಯಸುತ್ತಿದ್ದಾರೆ, ಸರ್ಕಾರ ಅದನ್ನು ನಿಷೇಧ ಮಾಡಿದರೂ ನಮ್ಮೂರಿನಲ್ಲಿ ಈ ಪದ್ದತಿ ಇನ್ನೂ ಇದೆ ಎನ್ನುತ್ತಾಳೆ 14 ವರ್ಷದ ಬಾಗಲಕೋಟೆಯ ಸಂಧ್ಯಾ(ಹೆಸರು ಬದಲಿಸಲಾಗಿದೆ).