ದೇಶಪಾಟ್ನಾದಲ್ಲಿ ರಾಹುಲ್ ಗಾಂಧಿಯನ್ನು 'ದೇವದಾಸ್'ಗೆ ಹೋಲಿಸಿ ಪೋಸ್ಟರ್ ಹಾಕಿದ ಬಿಜೆಪಿ!
ಪಾಟ್ನಾದಲ್ಲಿ ನಡೆಯುತ್ತಿರುವ ಪ್ರತಿಪಕ್ಷಗಳ ಸಭೆಗೆ ಮುನ್ನ ನಡೆಯುತ್ತಿರುವ ಪೋಸ್ಟರ್ ಸಮರಕ್ಕೆ ಇದೀಗ ಮತ್ತೊಂದು ಪೋಸ್ಟರ್ ಸೇರಿಕೊಂಡಿದೆ. ಬಿಜೆಪಿ ಶುಕ್ರವಾರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು ಬಾಲಿವುಡ್ನ ಪ್ರಸಿದ್ಧ ಪಾತ್ರ 'ದೇವದಾಸ್' ಎಂದು ಬಿಂಬಿಸುವ ಪೋಸ್ಟರ್ ಅನ್ನು ವೀರಚಂದ್ ಪಟೇಲ್ ಮಾರ್ಗದ ಪಕ್ಷದ ಕಚೇರಿಯ ಗೇಟ್ನಲ್ಲಿ ಹಾಕಿದೆ.