ವಿದೇಶಬಂಧನ ಕೇಂದ್ರಕ್ಕೆ ಕಮಲಾ ಹ್ಯಾರಿಸ್ ಭೇಟಿ: ಟ್ರಂಪ್ ಆಡಳಿತದಿಂದ ಮಾನವೀಯತೆ ವಿರುದ್ಧ ಅಪರಾಧ ಆರೋಪ
ಅಮೆರಿಕಾದಲ್ಲಿ ವಲಸಿಗರ ವಿವಾದ ತೀವ್ರಗೊಂಡಿರುವ ಬೆನ್ನಲ್ಲೇ, ಭಾರತೀಯ ಮೂಲದ ಸೆನೆಟರ್ ಕಮಲಾ ಹ್ಯಾರಿಸ್ ಇಲ್ಲಿನ ಬಂಧನ ಕೇಂದ್ರದಲ್ಲಿರುವ ಮಕ್ಕಳಿಂದ ಬೇರ್ಪಡಿಸಿದ್ದ ತಾಯಂದಿರನ್ನು ಭೇಟಿಯಾಗಿದ್ದು, ಟ್ರಂಪ್ ಆಡಳಿತ ಮಾನವೀಯತೆ ವಿರುದ್ಧದ ಅಪರಾಧ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.