ರಾಜ್ಯಉಡುಪಿ ಕೃಷ್ಣ ಮಠದ ವಸತಿಗೃಹದಲ್ಲಿ ಮುಸ್ಲಿಂ ಯುವತಿಗೆ ವಸತಿ ನಿರಾಕರಣೆ; ಅಂಗಲಾಚಿದರೂ ಕರುಣೆ ತೋರದ ಸಿಬ್ಬಂದಿ: CPI(M) ಖಂಡನೆ
ಈ ಬಗ್ಗೆ ಸೋಮವಾರ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಸುರೇಶ್ ಕಲ್ಲಗಾರ ಅವರು, ಬಳ್ಳಾರಿಯ ಯುವತಿಯೊಬ್ಬರಿಗೆ ಕೇವಲ ಅವರು ಮುಸ್ಲಿಂ ಸಮುದಾಯಕ್ಕೆ ಸೇರಿದವರು ಎಂಬ ಕಾರಣಕ್ಕಾಗಿ ಅಕ್ಟೋಬರ್ 3 ರಂದು ಮಠದ ವಸತಿ ಗೃಹದಲ್ಲಿ ರಾತ್ರಿ ತಂಗಲು ಅನುಮತಿ ನಿರಾಕರಿಸಲಾಗಿದೆ.