ದೇಶಒಂದು ರಾಷ್ಟ್ರ, ಒಂದು ಚುನಾವಣೆ': ಪ್ರಜಾಸತ್ತಾತ್ಮಕ ಭಾರತವನ್ನು ಸರ್ವಾಧಿಕಾರದತ್ತ ಬದಲಾಯಿಸಲು ಮೋದಿ ತಂತ್ರ- ಖರ್ಗೆ
ಒಂದು ರಾಷ್ಟ್ರ, ಒಂದು ಚುನಾವಣೆ ಕುರಿತು ಪರಿಶೀಲನೆಗಾಗಿ ಸಮಿತಿ ರಚಿಸಿರುವ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭಾನುವಾರ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಪ್ರಜಾಸತ್ತಾತ್ಮಕ ಭಾರತವನ್ನು ನಿಧಾನವಾಗಿ ಸರ್ವಾಧಿಕಾರದತ್ತ ಪರಿವರ್ತಿಸುವುದು ಮೋದಿ ಅವರ ತಂತ್ರವಾಗಿದೆ ಎಂದು ಟೀಕಿಸಿದ್ದಾರೆ.