Delta plus variant

ಮುಂಬೈನಲ್ಲಿ ಕೋವಿಡ್ ಡೆಲ್ಟಾ ಪ್ಲಸ್ ಸೋಂಕಿಗೆ ಮೊದಲ ಬಲಿ; 2 ಡೋಸ್ ಕೋವಿಡ್ ಲಸಿಕೆ ಪಡೆದಿದ್ದ ಮಹಿಳೆ ಸಾವು
ಸಂಭಾವ್ಯ ಕೊರೋನಾ 3ನೇ ಅಲೆ ಹಾಗೂ ಕೋವಿಡ್ ಸೋಂಕು ದಿನ ನಿತ್ಯ ಹಾವು ಏಣಿ ಆಟ ಆಡುತ್ತಿರುವ ನಡುವಲ್ಲೇ ಮುಂಬೈನಲ್ಲಿ ಡೆಲ್ಟಾ ಪ್ಲಸ್ ಕೋವಿಡ್ ರೂಪಾಂತರಿ ವೈರಸ್'ಗೆ ಮೊಟ್ಟ ಮೊದಲ ಬಲಿಯಾಗಿದೆ.

ದೇಶದಲ್ಲಿ ಕೊರೋನಾ ಏರಿಕೆಗೆ ಡೆಲ್ಟಾ ಪ್ಲಸ್ ಕಾರಣವಲ್ಲ, ಇದುವರೆಗೆ 86 ಪ್ರಕರಣ ಪತ್ತೆ: ಕೇಂದ್ರ
ದೇಶದಲ್ಲಿ ಇದುವರೆಗೆ ಡೆಲ್ಟಾ ಪ್ಲಸ್ ವೇರಿಯೆಂಟ್ ಹೊಂದಿರುವ 86 ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, ಮಹಾರಾಷ್ಟ್ರದಲ್ಲಿ ಮಾತ್ರ 45 ಪ್ರಕರಣಗಳು ವರದಿಯಾಗಿವೆ ಎಂದು ಕೇಂದ್ರ ಸರ್ಕಾರ ಮಂಗಳವಾರ ತಿಳಿಸಿದೆ.

ಡೆಲ್ಟಾ ಪ್ಲಸ್ ಗೆ ತಮಿಳುನಾಡಿನಲ್ಲಿ ಮೊದಲ ಬಲಿ, ಮದುರೈ ಮೂಲದ ಸೋಂಕಿತ ಸಾವು
ಮಾರಕ ಡೆಲ್ಟಾ ಪ್ಲಸ್ ರೂಪಾಂತರ ಸೋಂಕಿಗೆ ತಮಿಳುನಾಡಿನಲ್ಲಿ ಮೊದಲ ಬಲಿಯಾಗಿದ್ದು, ಮದುರೈ ಮೂಲದ ಸೋಂಕಿತರೊಬ್ಬರು ಸಾವನ್ನಪ್ಪಿದ್ದಾರೆ.

ಡೆಲ್ಟಾ ಪ್ಲಸ್ ರೂಪಾಂತರಿ ನಿಯಂತ್ರಣಕ್ಕೆ ದೊಡ್ಡ ಮಟ್ಟದಲ್ಲಿ ಪರೀಕ್ಷೆಗಳೇಕೆ ನಡೆಯುತ್ತಿಲ್ಲ: ಕೇಂದ್ರ ಸರ್ಕಾರಕ್ಕೆ ರಾಹುಲ್ ಗಾಂಧಿ ಪ್ರಶ್ನೆ
ಕೊರೋನಾ ವೈರಸ್ ನ ಡೆಲ್ಟಾ ಪ್ಲಸ್ ರೂಪಾಂತರವನ್ನು ಪರೀಕ್ಷಿಸಲು ಮತ್ತು ತಡೆಗಟ್ಟಲು "ದೊಡ್ಡ ಪ್ರಮಾಣದ ಪರೀಕ್ಷೆಗಳನ್ನು ಸರ್ಕಾರ ಏಕೆ ಮಾಡಲಾಗುತ್ತಿಲ್ಲ ಮತ್ತು ಈ ರೂಪಾಂತರಗಳ ವಿರುದ್ಧ ಹಾಲಿ ಲಸಿಕೆಗಳು ಎಷ್ಟು ಪರಿಣಾಮಕಾರಿ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.

ಭಾರತದಲ್ಲಿ ಇದುವರೆಗೆ 22 ಡೆಲ್ಟಾ ಪ್ಲಸ್ ರೂಪಾಂತರಿ ಪತ್ತೆ; ಇದರ ಬಗ್ಗೆ ಈಗಲೇ ಆತಂಕ ಬೇಡ: ಕೇಂದ್ರ
ದೇಶದಲ್ಲಿ ಇದುವರೆಗೆ 22 ಡೆಲ್ಟಾ ಪ್ಲಸ್ ರೂಪಾಂತರಿ ಕೊರೋನಾವೈರಸ್ ಪ್ರಕರಣಗಳು ಪತ್ತೆಯಾಗಿವೆ. ಅಲ್ಲದೆ ಈ ರೂಪಾಂತರಿ ಬಗ್ಗೆ ಹೆಚ್ಚು ಕಾಳಜಿ ವಹಿಸುವ ಅಗತ್ಯವಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ.

ಮಹಾರಾಷ್ಟ್ರದಲ್ಲಿ ಕೋವಿಡ್ ಡೆಲ್ಟಾ ಪ್ಲಸ್ ನ 21 ಪ್ರಕರಣಗಳು ಪತ್ತೆ
ಅತಿ ಹೆಚ್ಚು ಆತಂಕಕ್ಕೆ ಕಾರಣವಾಗಿರುವ ಕೊರೋನಾದ ಡೆಲ್ಟಾ ಪ್ಲಸ್ ರೂಪಾಂತರಿ ವೈರಾಣುವಿನ 21 ಪ್ರಕರಣಗಳು ಮಹಾರಾಷ್ಟ್ರದಲ್ಲಿ ಪತ್ತೆಯಾಗಿದೆ.

