ವಾಣಿಜ್ಯಬೈಜೂಸ್ಗೆ ಮತ್ತೊಂದು ಸಂಕಷ್ಟ: ಆಡಿಟರ್ ಸಂಸ್ಥೆ ಹೊರಕ್ಕೆ!
ಬೆಂಗಳೂರು ಮೂಲದ ಎಜುಟೆಕ್ ಸ್ಟಾರ್ಟಪ್ ಕಂಪನಿ 'ಬೈಜೂಸ್' ಇದೀಗ ಮತ್ತೊಮ್ಮೆ ಸಂಕಷ್ಟಕ್ಕೆ ಸಿಲುಕಿದೆ. ಈ ಬಾರಿ, 2021-2022 ರ ಹಣಕಾಸು ವರ್ಷಕ್ಕೆ ಆರ್ಥಿಕ ಹೇಳಿಕೆಗಳ ಸಲ್ಲಿಕೆ ವಿಳಂಬದಿಂದಾಗಿ ಲೆಕ್ಕಪರಿಶೋಧಕ 'ಡೆಲಾಯ್ಟ್ ಹ್ಯಾಸ್ಕಿನ್ಸ್ & ಸೇಲ್ಸ್' ಕಂಪನಿಯು ಬೈಜೂಸ್ಗೆ ತನ್ನ ಆಡಿಟಿಂಗ್ ಸೇವೆಗಳನ್ನು ನಿಲ್ಲಿಸಲು ನಿರ್ಧರಿಸಿದೆ.