Dattamala

'ಬಲ'ಕ್ಕೆ ವಾಲುತ್ತಿದ್ದಾರಾ ಕುಮಾರಸ್ವಾಮಿ?; ಸಮಯ ಬಂದ್ರೆ ದತ್ತಮಾಲೆ ಧಾರಣೆ: ಎಚ್‌ಡಿಕೆಗೆ ಹಿಂದೂಪರ ಸಂಘಟನೆಗಳ ಬೆಂಬಲ
ಮೇ 10ರ ವಿಧಾನಸಭಾ ಚುನಾವಣೆಯವರೆಗೂ ಹಿಂದೂಪರ ಸಂಘಟನೆಗಳಿಂದ ದೂರವಿದ್ದ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ, ಸಮಯ ಬಂದ್ರೆ ದತ್ತಮಾಲೆ ಹಾಕುತ್ತೇನೆ ಎಂಬ ಹೇಳಿಕೆಗೆ ಹಲವಾರು ಮಂದಿ ಬೆಂಬಲ ಸೂಚಿಸಿದ್ದಾರೆ.

ಪರಿಸ್ಥಿತಿ ಬಂದರೆ ದತ್ತಮಾಲೆ ಧರಿಸುತ್ತೇನೆ; ಜೆಡಿಎಸ್ ಮುಖಂಡ ಎಚ್‌ಡಿ ಕುಮಾರಸ್ವಾಮಿ
'ದತ್ತಮಾಲೆ ಧರಿಸುವುದು ದೇವರ ಕೆಲಸ. ಇದು ಅಕ್ರಮವಲ್ಲ. ನಾನು ಯಾವುದೇ ಕಾನೂನು ಬಾಹಿರ ಕೆಲಸದಲ್ಲಿ ತೊಡಗುವುದಿಲ್ಲ. ಸಂಸ್ಕೃತಿ ಉಳಿಸಲು ಕಾನೂನಾತ್ಮಕವಾಗಿ ಏನು ಬೇಕಾದರೂ ಮಾಡುತ್ತೇನೆ' ಎಂದು ಜೆಡಿಎಸ್ ಮುಖಂಡ ಎಚ್‌ಡಿ ಕುಮಾರಸ್ವಾಮಿ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

