ವಿಶೇಷಗೌರಿಬಿದನೂರಿನ ಮಣ್ಣಲ್ಲಿ ಅರಳಿದ ಮರುಭೂಮಿ ಹಣ್ಣು: ಅಸಾಧ್ಯವನ್ನು ಸಾಧ್ಯವಾಗಿಸಿದ ಹಠವಾದಿ; ಸ್ವಾವಲಂಬಿ ಕೃಷಿಗೆ ಹೊಸ ಭಾಷ್ಯ ಬರೆದ ದಿವಾಕರ್ ಚನ್ನಪ್ಪ..!
ಮೂರು ಸಹೋದರರಲ್ಲಿ ಎರಡನೆಯವರಾದ ದಿವಾಕರ್ ಅವರಿಗೆ ಆರಂಭದಲ್ಲಿ ಕೃಷಿ ಅವರ ಆಯ್ಕೆಯಾಗಿರಲಿಲ್ಲ. ಅನಾರೋಗ್ಯಕ್ಕೆ ತುತ್ತಾದ ತಂದೆಯ ಆರೈಕೆಗಾಗಿ ನೆಮ್ಮದಿಯಂತಿದ್ದ ಶಿಕ್ಷಕ ವೃತ್ತಿಗೆ ವಿರಾಮ ನೀಡಬೇಕಾಯಿತು. ಆ ನಿರ್ಧಾರವೇ ಮುಂದೆ ಅವರ ಬದುಕಿನ ದಿಕ್ಕನ್ನೇ ಬದಲಿಸಿತು.