Dasara 2022

ಮೈಸೂರು ದಸರಾ 2022: ನಾಡಹಬ್ಬ ದಸರಾ ಜಂಬೂ ಸವಾರಿ ಯಶಸ್ವಿ, ಪಂಜಿನ ಕವಾಯತಿನೊಂದಿಗೆ ವಿದ್ಯುಕ್ತ ತೆರೆ
ವಿಶ್ವವಿಖ್ಯಾತ ನಾಡಹಬ್ಬ ದಸರಾ ಜಂಬೂ ಸವಾರಿಗೆ ವರ್ಣರಂಜಿತ ತೆರೆಬಿದ್ದಿದ್ದು, ಎರಡು ವರ್ಷ ನಂತರ ಚಿನ್ನದ ಅಂಬಾರಿ ಹಾಗೂ ಜಂಬೂ ಸವಾರಿ ನೋಡಿ ಅಪಾರ ಭಕ್ತರು ಪುನೀತರಾಗಿದ್ದಾರೆ.

ಯುವಕನಿಗೆ ರಾಜ್ಯದ ಮುಖ್ಯಮಂತ್ರಿ ಹುದ್ದೆ: ದೇವರಗುಡ್ಡದ ಕಾರ್ಣಿಕದ ಗೊರವಯ್ಯ ಭವಿಷ್ಯ
ಕರ್ನಾಟಕದಲ್ಲಿ ಯುವಕನಿಗೆ ರಾಜ್ಯದ ಮುಖ್ಯಮಂತ್ರಿ ಹುದ್ದೆ ದೊರೆಯಲಿದೆ ಎಂದು ದೇವರಗುಡ್ಡದ ಕಾರ್ಣಿಕದ ಗೊರವಯ್ಯ ಭವಿಷ್ಯ ನುಡಿದಿದ್ದಾರೆ.

ಕಾನ್ಪುರದಲ್ಲಿ ಲಂಕಾಪತಿ ರಾವಣನಿಗೆಂದೇ ವಿಶೇಷ ದೇವಾಲಯ
ರಾವಣೇಶ್ವರ ಅಥವಾ ರಾವಣನ ಬಗ್ಗೆ ಚರ್ಚೆಗಳು ಆಗಾಗ್ಗೆ ನಡೆಯುತ್ತಿರುತ್ತದೆ. ಸೀತಾಪಹರಣ ಮಾಡಿದ ರಾವಣ ಪರಮ ಶಿವಭಕ್ತನೆಂದೂ ಅವನನ್ನು ಕೆಲವು ಕಡೆ ಪೂಜೆ ಮಾಡಲಾಗುತ್ತದೆ ಎನ್ನುವ ಕಥೆಗಳು ಚಾಲ್ತಿಯಲ್ಲಿವೆ. ಶ್ರೀಲಂಕಾದಲ್ಲಿ ರಾವಣೇಶ್ವರನ ದೇಗುಲ ಇದ್ದು ಅವನನ್ನು ಅಲ್ಲೂ ಕೂಡ ಪೂಜಿಸಲಾಗುತ್ತದೆ.

ನಾಡಿನಾದ್ಯಂತ ವಿಜಯ ದಶಮಿ ಸಂಭ್ರಮ, ಜಂಬೂ ಸವಾರಿಗೆ ಸಕಲ ಸಿದ್ಧತೆ
ನಾಡಿನಾದ್ಯಂತ ವಿಜಯ ದಶಮಿ ಸಂಭ್ರಮ ಮನೆ ಮಾಡಿದೆ. ದುಷ್ಟ ಶಕ್ತಿ ಮೇಲೆ ಶಿಷ್ಟ ಶಕ್ತಿಯು ವಿಜಯ ಸಾರುವ ಸಾಂಕೇತಿಕವಾಗಿ ಹಬ್ಬ ಆಚರಿಸಲಾಗುತ್ತಿದ್ದು, ಮೈಸೂರಿನಲ್ಲಿ ಜಂಬೂ ಸವಾರಿಗೆ ಸಕಲ ಸಿದ್ಧತೆ ನಡೆದಿದೆ.

ದಸರಾ 2022: ವರ್ಣರಂಜಿತ ದೀಪಾಲಂಕಾರದಲ್ಲಿ ಮಿನುಗುತ್ತಿರುವ ಮೈಸೂರು! ಸುಂದರ ಆಕರ್ಷಕ ಫೋಟೋಗಳು
ವಿಶ್ವ ವಿಖ್ಯಾತ ದಸರಾ ಮಹೋತ್ಸವ 2022 ಅಂಗವಾಗಿ ಸಾಂಸ್ಕೃತಿಕ ನಗರಿ ಮೈಸೂರು ವರ್ಣರಂಜಿತ ದೀಪಾಲಂಕಾರದಿಂದ ನವ ವಧುವಿನಂತೆ ಮಿನುಗುತ್ತಿದೆ. ಪ್ರಮುಖ ವೃತ್ತಗಳು, ರಸ್ತೆಗಳು, ಕಟ್ಟಡಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಿದ್ದು, ಪ್ರವಾಸಿಗರನ್ನು ಆಕರ್ಷಿಸುತ್ತಿದೆ.

ಮಂಗಳೂರು ದಸರಾದ ವೈಭವ, ಹುಲಿ ವೇಷ ಕುಣಿತದ ಬಗ್ಗೆ ತಿಳಿಯೋಣ ಬನ್ನಿ..
ಆಶ್ವಯುಜ ಮಾಸದ ಶುಕ್ಲ ಪಕ್ಷದ ಪಾಡ್ಯದಿಂದ ಆರಂಭವಾಗಿ ದಶಮಿಯವರೆಗೂ ನಡೆಯುವ ವೈಭವದ ಹಬ್ಬ ದಸರಾ. 1610ರಲ್ಲಿ ವಿಜಯನಗರದ ತಿರುಮಲರಾಯರನ್ನು ಸೋಲಿಸಿದ ಮೈಸೂರಿನ ಶ್ರೀರಾಜ ಒಡೆಯರ್ ಅವರು ಸ್ವತಂತ್ರ್ಯ ಮೈಸೂರು ಸಂಸ್ಥಾನವನ್ನು ಕಟ್ಟಿದ್ದಲ್ಲದೇ, ವಿಜಯನಗರದಿಂದ ರತ್ನ ಖಚಿತ ಸಿಂಹಾಸವನ್ನೂ ಉಡುಗೊರೆಯ ರೂಪದಲ್ಲಿ ಪಡೆದರು.

ಮಡಿಕೇರಿ ದಸರಾ ರೂಢಿಗೆ ಬಂದದ್ದು ಹೇಗೆ, ಹೇಗಿರುತ್ತದೆ ಆಚರಣೆ?
ಮೈಸೂರಿನಲ್ಲಿ ಅದ್ದೂರಿಯಾಗಿ ನಡೆಯುವ ದಸರಾದಂತೆಯೇ ಕೊಡಗಿನ ಮಡಿಕೇರಿಯ ದಸರಾ ಆಚರಣೆಯೂ ಅಷ್ಟೇ ಪ್ರಸಿದ್ಧಿಯಾಗಿದೆ. ಮೈಸೂರು ದಸರಾ ಮಧ್ಯಾಹ್ನ ಆರಂಭವಾಗಿ ಸಂಜೆ ಸೂರ್ಯಾಸ್ತಮಾನದ ವೇಳೆಗೆ ಪೂರ್ಣಗೊಂಡರೆ ಮಡಿಕೇರಿ ದಸರಾ ಆರಂಭವಾಗುವುದೇ ರಾತ್ರಿಯ ವೇಳೆ.

ನವರಾತ್ರಿಯಲ್ಲಿ ಶಾರದಾಂಬೆಗೆ ಒಂಭತ್ತು ದಿನ ವಿವಿಧ ಅಲಂಕಾರ ಏಕೆ?
ನವರಾತ್ರಿಯ ಹಿಂದಿನ ದಿನ ಮಹಾಲಯ ಅಮಾವಾಸ್ಯೆಯಂದು ಶೃಂಗೇರಿ ಶಾರದಾಂಬೆಗೆ ಮಹಾಭಿಷೇಕ ಮಾಡಿ ನಾನಾ ರೀತಿಯ ಫಲ-ಪಂಚಾಮೃತ ಅಭಿಷೇಕದ ನಂತರ ಶತಾಯ ರುದ್ರಾಭಿಷೇಕ ಮತ್ತು ಮಹಾನ್ಯಾಸ ಮತ್ತು 108 ಅಭಿಷೇಕದೊಂದಿಗೆ ಶ್ರೀ ಸೂಕ್ತವನ್ನು ಪಠಿಸುತ್ತಾರೆ.

ದಸರಾ ಹಬ್ಬ, ಪಟ್ಟದ ಬೊಂಬೆ ಅಲಂಕಾರ, ಆಚರಣೆ...
ದಸರಾ ಹಬ್ಬದ ಸಮಯದಲ್ಲಿ ರಾಜಾರಾಣಿಯರ ಸ್ವರೂಪವಾಗಿ ಪಟ್ಟದ ಬೊಂಬೆಗಳನ್ನು ಮನೆ ಮನೆಗಳಲ್ಲಿ ಕೂರಿಸಿ ಪೂಜಿಸುವುದು ನಡೆದುಕೊಂಡು ಬಂದಿರುವ ಸತ್ಸಂಪ್ರದಾಯ.

