ರಾಜ್ಯಡಾರ್ಕ್ ವೆಬ್ಸೈಟ್ ಮೂಲಕ ನೆದರ್ಲಾಂಡ್ನಿಂದ ಮಾದಕ ವಸ್ತು ತರಿಸುತ್ತಿದ್ದ ಮೂವರ ಬಂಧನ: 20 ಲಕ್ಷ ರೂ. ಮೌಲ್ಯದ ಗಾಂಜಾ ವಶ
ನೆದರ್ಲಾಂಡ್ನಿಂದ ಡಾರ್ಕ್ ವೆಬ್ಸೈಟ್ ಮೂಲಕ ಮಾದಕ ವಸ್ತುಗಳನ್ನು ತರಿಸುತ್ತಿದ್ದ ಬಿಹಾರ ಮೂಲದ ಇಬ್ಬರು ಸೇರಿ ಮೂವರು ಆರೋಪಿಗಳನ್ನು ಬಂಧಿಸಿರುವ ಸಿಸಿಬಿ ಪೊಲೀಸರು ಸುಮಾರು 20 ಲಕ್ಷ ರೂ.ಬೆಲೆಯ 225 ಎಲ್ಎಸ್ಡಿ ಸ್ಟಿಪ್ಸ್, 2 ಕೆ.ಜಿ ಗಂಜಾವನ್ನು ವಶಪಡಿಸಿಕೊಂಡಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ತಿಳಿಸಿದ್ದಾರೆ.