ವಾಣಿಜ್ಯ8 ತಿಂಗಳ ನಂತರ ದಾಖಲೆ ಬರೆದ ಸೆನ್ಸೆಕ್ಸ್: 60 ಸಾವಿರ ಗಡಿ ದಾಟಿದ ಮುಂಬೈ ಷೇರು ಪೇಟೆ ಸೂಚ್ಯಂಕ
ಈ ವರ್ಷದ ಜನವರಿಯಲ್ಲಿ 50 ಸಾವಿರದಲ್ಲಿದ್ದ ಸೆನ್ಸೆಕ್ಸ್ ನಂತರ ಕಳೆದ 8 ತಿಂಗಳಲ್ಲಿ ಇದೇ ಮೊದಲ ಬಾರಿಗೆ ಶುಕ್ರವಾರ 60 ಸಾವಿರದ ಗಡಿ ದಾಟಿದೆ. ಕಳೆದ ಜನವರಿ 21ರಂದು ಸೆನ್ಸೆಕ್ಸ್ 50 ಸಾವಿರ ಗಡಿಯನ್ನು ದಾಟಿತ್ತು. ಇದೀಗ 10 ಸಾವಿರ ಅಂಕಗಳಷ್ಟು ಏರಿಕೆ ಕಂಡು ಇಂದು ಸಾರ್ವಕಾಲಿಕ ದಾಖಲೆ ನಿರ್ಮಿಸಿತು.